ಕುಷ್ಟಗಿ: ತಳುವಗೇರಾ ಆದರ್ಶ ವಿದ್ಯಾಲಯ ಪ್ರವೇಶಕ್ಕೆ ‘ಕೌನ್ಸೆಲಿಂಗ್’!

ಸುದ್ದಿ ಸಮರ್ಪಣ |

ಕುಷ್ಟಗಿ: ತಾಲೂಕಿನ ತಳುವಗೇರಾ ಆದರ್ಶ ವಿದ್ಯಾಲಯದ 6ನೇ ತರಗತಿಗೆ ಖಾಲಿ ಇರುವ 35 ಸೀಟುಗಳಿಗೆ 4ನೇ ಸುತ್ತಿನ ಆಯ್ಕೆ ಪ್ರಕ್ರಿಯೆ ಅಂದರೆ ಕೌನ್ಸೆಲಿಂಗ್ ನಡೆಸಲು ಅರ್ಜಿ ಸಲ್ಲಿಸಿದ 5ನೇ ತರಗತಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವಿದ್ಯಾಲಯದ ಮುಖ್ಯಶಿಕ್ಷಕ ಸಂಗಪ್ಪ ಕಿರಸೂರು ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಈಗಾಗಲೇ 1 : 20ರ ಅನುಪಾತದಲ್ಲಿ ಅರ್ಹ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿ ಆನ್ಲೈನ್ ಮೂಲಕ ಕೌನ್ಸಲಿಂಗ್ ಪ್ರಕ್ರಿಯೆ ನಡೆಸುವಂತೆ ರಾಜ್ಯ ಕಚೇರಿಯಿಂದ ಸೂಚನೆ ಬಂದಿದೆ. ಈ ಬಗ್ಗೆ  ಅರ್ಹ ವಿದ್ಯಾರ್ಥಿಗಳ ಪಾಲಕರಿಗೆ ಮೊಬೈಲ್ ಕರೆ ಮೂಲಕ ತಿಳಿಸಲಾಗಿದೆ.

ಖಾಲಿಯಿರುವ ಸ್ಥಾನಗಳು ಇಂತಿದೆ: ಸಾಮಾನ್ಯ ವರ್ಗ – 14 ಸ್ಥಾನ, ಪರಿಶಿಷ್ಟ ಜಾತಿ – 09 ಸ್ಥಾನ, ಪರಿಶಿಷ್ಟ ಪಂಗಡ – 03 ಸ್ಥಾನ, ಪ್ರವರ್ಗ-1 – 01 ಸ್ಥಾನ, ಪ್ರವರ್ಗ 2ಎ – 03 ಸ್ಥಾನ, ಪ್ರವರ್ಗ 2ಬಿ – 02 ಸ್ಥಾನ ಹಾಗೂ ಪ್ರವರ್ಗ 3ಎ  – 03 ಸ್ಥಾನ ಸೇರಿ ಒಟ್ಟು 35 ಸ್ಥಾನ ಖಾಲಿಯಿವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಆಗಸ್ಟ್ 13 ರಂದು ಕೌನ್ಸಲಿಂಗ್ ನಡೆಸಲಾಗುತ್ತದೆ. ಇನ್ನುಳಿದ ಮೀಸಲಾತಿ ವರ್ಗದ ವಿದ್ಯಾರ್ಥಿಗಳಿಗೆ ಆಗಸ್ಟ್ 14ರಂದು ತಳುವಗೇರಾ ಆದರ್ಶ ವಿದ್ಯಾಲಯದಲ್ಲಿ ನಡೆಯುತ್ತದೆ. ಬೆಳಿಗ್ಗೆ 09-30ಕ್ಕೆ ಕೌನ್ಸಲಿಂಗ್ ಆರಂಭವಾಗಲಿದ್ದು, ಈ ಸಮಯದೊಳಗೆ ಅರ್ಹ ವಿದ್ಯಾರ್ಥಿಗಳು ಕೌನ್ಸೆಲಿಂಗ್’ಗೆ ತಯಾರಿ ಇರಬೇಕು.

  • ಹೆಚ್ಚಿನ ಮಾಹಿತಿಗೆ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ ಸಂಗಪ್ಪ ಕಿರಸೂರು ಅವರ ಮೊಬೈಲ್ ಸಂಖ್ಯೆ 90089 76878ಗೆ ಸಂಪರ್ಕಿಸಬಹುದು.