Blog
ಕುಟುಂಬಗಳ ಆರ್ಥಿಕ ಸಬಲತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂರಕ : ಬಳೂಟಗಿ
ಕುಷ್ಟಗಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಕುಟುಂಬಗಳ ಆರ್ಥಿಕ ಸಬಲತೆಗೆ ಪೂರಕವಾಗಿದೆ ಎಂದು ಜಿಲ್ಲಾ ಜನಜಾಗ್ರತಿ ವೇದಿಕೆಯ ಮಾಜಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಹೇಳಿದರು.
ಅವರ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ತಾಲೂಕ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರೇಂದ್ರ ಹೆಗ್ಗಡೆ ಅವರ ವಿಶೇಷ ಕಾರ್ಯಕ್ರಮವಾಗಿದ್ದು, ಯೋಜನೆಯು ನಮ್ಮ ತಾಲೂಕಿಗೆ ಬಂದ ನಂತರ ಸಂಘಕ್ಕೆ ಸೇರಿದ ಪ್ರತಿಯೊಂದು ಕುಟುಂಬದವರು, ಶಿಸ್ತು, ಸಮಯ ಪಾಲನೆ, ಹೊಂದಾಣಿಕೆ, ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾರೆ. ಕೃಷಿ ಕೃಷಿಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಂಡು ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ, ಬದಲಾದಂತಹ ವ್ಯವಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಬಲವರ್ಧನೆಗೆ ಸಂಬಂಧಿಸಿದ ಯೋಜನೆಯಗಳ ಕುರಿತು ಹಾಗೂ ಪ್ರಗತಿ ನಿಧಿ ಕಾರ್ಯಕ್ರಮ, SBI ಬ್ಯಾಂಕಿಂಗ್ ಪ್ರತಿನಿಧಿಯಾಗಿ ಸಂಘಕ್ಕೆ ನೇರ ಕಡಿಮೆ ಬಡ್ಡಿಯಲ್ಲಿ ಹಣಕಾಸಿನ ನೆರವು ಸೇರಿದಂತೆ ಇತ್ಯಾದಿ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಕುರಿತು ಮಾತನಾಡಿದ ಅವರು., ಮಾನಸಿಕ ಬೌದ್ಧಿಕ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಆ ಕುರಿತು ಒಕ್ಕೂಟದ ಪದಾಧಿಕಾರಿಗಳಿಗೆ ವಿವರವಾದ ಮಾಹಿತಿ ನೀಡಿದರು.
ಗಂಗಾವತಿಯ SBI ಬ್ಯಾಂಕ್ RACC ಮುಖ್ಯ ವ್ಯವಸ್ಥಾಪಕ ವಿರೂಪಾಕ್ಷ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ SBI ಬ್ಯಾಂಕಿನ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದೆ. ಗುಂಪಿನ ಖಾತೆಯನ್ನು SBI ಬ್ಯಾಂಕಿನಲ್ಲಿ ತೆರೆಯಲಾಗಿದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಸಂಘಗಳಿಗೆ ನೇರ ಸಾಲ ನೀಡಲಾಗುತ್ತಿದೆ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಜನಜಾಗ್ರತಿ ವೇದಿಕೆಯ ಪ್ರಮುಖ ವೀರೇಶ ಬಂಗಾರಶೆಟ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಷ್ಟಗಿ ತಾಲೂಕು ಯೋಜನಾಧಿಕಾರಿ ಶೇಖರ ನಾಯಕ ರವರು ತಾಲೂಕಿನ ವರದಿ ಮಂಡಿಸಿದರು.
ಜಿಲ್ಲಾ ಜನಜಾಗೃತಿ ಸದಸ್ಯರಾದ ಹನುಮಸಾಗರದ ವಿವಿ ಹಿರೇಮಠ, ಮಹಾಂತಯ್ಯ ಅರಳೆಲಿಮಠ, ಜಯತೀರ್ಥ ದೇಸಾಯಿ ಬಳೊಟಗಿ, ರುದ್ರಪ್ಪ ಅಕ್ಕಿ ಹಾಗೂ ವಾಸವಿ ಒಕ್ಕೂಟದ ಅಧ್ಯಕ್ಷರು, ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಆಂತರಿಕ ಲೆಕ್ಕಪರಿಶೋದಕರು, jvk ಸಮನ್ವಯ ಅಧಿಕಾರಿ, ತಾಲೂಕ csc ನೋಡಲ್ ಅಧಿಕಾರಿ, ಕಚೇರಿ ಸಿಬಂದಿ ಹಾಗೂ ಸೇವಾ ಪ್ರತಿನಿಧಿಗಳು, ತಾಲೂಕಿನ ಒಕ್ಕೂಟದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರೈತರೇ ಜಗದ ಬೆನ್ನೆಲುಬು ಎಂದು ಹೇಳುವ ಮಾತಿನಂತೆ, ರೈತರು ದುಡಿದರೆ ಸಂಪತ್ತು ದುಡಿಯದಿದ್ದರೆ ಎಲ್ಲರಿಗೂ ಆಪತ್ತು, ಆದ್ದರಿಂದ ರೈತರನ್ನು ಗೌರವಿಸಬೇಕು ಹಾಗೂ ಸಹಕಾರ ನೀಡಬೇಕು. ಯೋಜನೆಯ ಕಾರ್ಯಕ್ರಮಗಳನ್ನು ಎಲ್ಲರೂ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು
– ದೇವೇಂದ್ರಪ್ಪ ಬಳೂಟಗಿ, ಮಾಜಿ ಅಧ್ಯಕ್ಷರು, ಜಿಲ್ಲಾ ಜನಜಾಗ್ರತಿ ವೇದಿಕೆ, ಕೊಪ್ಪಳ.