– ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಕೂಡಲಸಂಗಮ ಜಗದ್ಗುರುಗಳು..!

 

– ಶರಣಪ್ಪ ಕುಂಬಾರ.

ಕೊಪ್ಪಳ : ಪುನೀತ್ ರಾಜಕುಮಾರ್ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಸ್ವಾಮಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು..!

ಪುನೀತ್ ರಾಜಕುಮಾರ ಅವರ ಧರ್ಮ ಪತ್ನಿ ಆಶ್ವಿನಿ , ಮಕ್ಕಳಾದ ದೃತಿ ಹಾಗೂ ವಂದಿತಾ, ವಿನಯ್ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.
ಮಾಜಿ ಮೇಯರ್ ಪುಟ್ಟರಾಜ್, ಮಾಜಿ ಸದಸ್ಯ ನಟರಾಜ್, ಯುವ ನಟ ಅಭಿಲಾಷ , ನಗರ ಅಧ್ಯಕ್ಷ ಶಿವಪುತ್ರ ಮಲ್ಲೆವಾಡ , ಕಾರ್ಯದರ್ಶಿ ವೀರೇಶ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಪುನೀತ್ ರಾಜಕುಮಾರ ಅವರ ಹೆಸರಿನಲ್ಲಿ ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಅಥವಾ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸರಕಾರಕ್ಕೆ ಶ್ರೀಗಳು ಒತ್ತಾಯಿಸಿದರು..!!