– ಕೊಪ್ಪಳ ಕ್ರೀಡಾಪಟುಗೆ ಬೆಳ್ಳಿ ಪದಕ..!

 

 

– ಶರಣಪ್ಪ ಕುಂಬಾರ.

ಕೊಪ್ಪಳ : ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಥ್ರೋ ಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವು ಪೈನಲ್ ಹಂತ ತಲುಪಿ ಎರಡನೇ ಸ್ಥಾನಕ್ಕೆ (ಬೆಳ್ಳಿ) ಸಮಾಧಾನ ಪಟ್ಟುಕೊಂಡಿದೆ..!


ಸಬ್ ಜೂನಿಯರ್ ತಂಡದಲ್ಲಿ ಮುಖ್ಯ ಆಟಗಾರನಾಗಿ ಭಾಗವಹಿಸಿದ ಜಿಲ್ಲೆಯ ಗಂಗಾವತಿಯ ವಿದ್ಯಾನಗರದ ಶ್ರೀ ಶಾರದಾ ವಿದ್ಯಾ ಸಂಸ್ಥೆಯ ಎಸ್.ಜಿ.ವಿ.ಆರ್ ತೆಲಗು ಮಾಧ್ಯಮದ ವಿದ್ಯಾರ್ಥಿ ಆನಂದ ಪಿ, ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಹರಿಯಾಣ ರಾಜ್ಯದ ತಂಡದೊಂದಿಗೆ ರಾಜ್ಯದ ತಂಡವು ತೀವ್ರ ಪೈಪೋಟಿ ನೀಡುವ ಮೂಲಕ ಸೋಲೊಪ್ಪಿಕೊಂಡಿದೆ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯ ಹಾಗೂ ಶಾಲೆಯ ಕಿರ್ತಿಗೆ ಪಾತ್ರವಾದ ಕ್ರೀಡಾಪಟು ಆನಂದ ಪಿ ಅವರಿಗೆ ಸಂಸ್ಥೆಯ ಅಧ್ಯಕ್ಷರು ಸೇರಿದಂತೆ ಸದಸ್ಯರು, ಮುಖ್ಯಗುರು, ದೈಹಿಕ ಶಿಕ್ಷಣ ಶಿಕ್ಷಕ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಕ್ರೀಡಾಭಿಮಾನಿಗಳು ಥ್ರೋ ಬಾಲ್ ಕ್ರೀಡಾಪಟುವನ್ನು ಅಭಿನಂದಿಸಿದ್ದಾರೆ..!!