– ಕ್ರಿಮಿನಾಶಕಗಳ ಖರೀದಿ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗಿರುವುದು ಅವಶ್ಯಕತೆವಿತೆ.
ಕೊಪ್ಪಳ : ಇಂದಿನ ಆಧುನಿಕ ಬೇಸಾಯ ಪದ್ಧತಿಯಲ್ಲಿ ಉತ್ತಮ ಇಳುವರಿ ಪಡೆಯಲೇಬೇಕು ಅಂದರೆ, ತಾಕುಗಳಿಗೆ ತಗುಲಬಹುದಾದ ಕ್ರಿಮಿ, ಕೀಟಗಳ ಹತೋಟಿಗೆ ಕಡ್ಡಾಯವಾಗಿ ಕ್ರಿಮಿನಾಶಕ ಬಳಕೆ ಮಾತ್ರ ಅತ್ಯಗತ್ಯವಾಗಿ ಬಳಸಲೇಬೇಕಾಗುತ್ತದೆ..!
ಇಂತಹ ಅತ್ಯಗತ್ಯವಾಗಿರುವ ಕ್ರಿಮಿನಾಶಕಗಳನ್ನು ಖರೀದಿಸುವ ಮುನ್ನ ರೈತರು ಎಚ್ಚರಿಕೆವಹಿಸುವುದು ಅದರ ಅಷ್ಟೇ, ಪ್ರಾಮುಖ್ಯವಾಗಿರುತ್ತದೆ ಎಂಬ ಉತ್ತಮ ಸಂದೇಶವನ್ನು ಕೊಪ್ಪಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆಗಿರುವ ಮುತ್ತಣ್ಣ ಈಳಗೇರ ರೈತ ಬಂಧುಗಳಿಗೆ ರವಾನಿಸಿದ್ದಾರೆ.
ರೈತರು ಕ್ರಿಮಿನಾಶಕಗಳನ್ನು ಖರೀದಿಸುವಾಗ ಇಂತಹ ಮುಖ್ಯವಾದ ಕೆಲ ಅಂಶಗಳನ್ನು ಪಾಲಿಸಲೇಬೇಕು. ಅದರಲ್ಲಿ ಮುಖ್ಯವಾದವು.. ಅಧಿಕೃತ ಕ್ರಿಮಿನಾಶಕ ಖರೀದಿದಾರರಿಂದಲೇ ಕ್ರಿಮಿನಾಶಕಗಳನ್ನು ಖರೀದಿಸಬೇಕು. ಖರೀದಿ ಬಳಿಕ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಕ್ರಿಮಿನಾಶಕಗಳ ಬಾಟಲ್ ಅಥವಾ ಪೌಚ್ ಮೇಲೆ ಬ್ಯಾಚ್, ಲಾಟ್ ನಂಬರ್ ಜೊತೆಗೆ ಪ್ರಮಾಣ (ಅಳತೆ) ಇತ್ಯಾದಿ ನಮೂದಿಸಿರಬೇಕು. ಅಧಿಕೃತ ಐ ಎಸ್ ಐ ಮಾರ್ಕ್ ಜೊತೆಗೆ ತಯಾರಿಸಿದ ಕಂಪನಿ ಹೆಸರು ಹಾಗೂ ಮಾರಾಟಗಾರರ ವಿಳಾಸ ಗಮನಿಸಬೇಕು. ಕ್ರಿಮಿನಾಶಕ ವಸ್ತುಗಳ ತಾಂತ್ರಿಕತೆ ಜೊತೆಗೆ ವಸ್ತುವಿನ ಕ್ರಿಯಾಶೀಲತೆಯನ್ನು ಖಾತರಿಪಡಿಸಿಕೊಳ್ಳುವುದು ಒಳಿತು. ಅಲ್ಲದೆ, ಕ್ರಿಮಿನಾಶಕಗಳ ಗುಣಮಟ್ಟದ ಜೊತೆಗೆ ಕ್ರಿಮಿನಾಶಕವನ್ನು ತಯಾರಿಸಿದ ದಿನಾಂಕ, ಅವಧಿ ಮಿತಿಯ ದಿನಾಂಕಗಳನ್ನು ಜಾಗೃತರಾಗಿ ಪರೀಕ್ಷಿಸಿದಲ್ಲಿ ಮಾತ್ರ ಮುಂದೆ ಸಂಭವಿಸಬಹುದಾದ ಹಾನಿ, ವೈಫಲ್ಯತೆ ಇತ್ಯಾದಿ ಪರಿಹಾರಗಳನ್ನು ಕಂಪನಿಗಳಿಂದ ಪಡೆಯಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಕ್ರಿಮಿನಾಶಕಗಳ ಬಳಕೆಯ ವಿಧಾನ ಮತ್ತು ರಕ್ಷಣೆ ಇತ್ಯಾದಿಗಳು ಮುಖ್ಯವಾಗಿರುತ್ತವೆ.
ಈ ಎಲ್ಲಾ ಪ್ರಮುಖ ಜಾಗೃಕತೆಗಳನ್ನು ರೈತರು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ಭವಿಷ್ಯದಲ್ಲಿ ಯಶಸ್ವಿಯಾಗಿ ಜೀವನ ಸಾಗಿಸಲು ಸಾಧ್ಯವೆಂಬುವುದು ನಮ್ಮ ಜಾಗೃಕತೆ ಸಂದೇಶದ ಮುಖ್ಯ ಉದ್ಧೇಶ ಸಫಲತೆಗೆ ಕಾರಣವಾಗಬಹುದು ಅಲ್ಲವೇ..!?
– ಶರಣಪ್ಪ ಕುಂಬಾರ.
ಮೊ.98456 51218