– ಶರಣಪ್ಪ ಕುಂಬಾರ.
ಕೊಪ್ಪಳ : ಮಾತೃ ಇಲಾಖೆ ಆಗಿರುವ ಕಂದಾಯ ಇಲಾಖೆಯ ದಿನಾಚರಣೆಯಂದು ವಿಶೇಷವಾಗಿ ಪರಿಸರ ಕಾಳಜಿ ಹಿತದೃಷ್ಟಿಯಿಂದ ಹಸಿರೋತ್ಸವವನ್ನು ಆಚರಿಸಲಾಗಿತು ಎಂದು ತಹಶೀಲ್ದಾರ ಎಂ. ಸಿದ್ದೇಶ ಅಭಿಪ್ರಾಯವ್ಯಕ್ತಪಡಿಸಿದರು.
ಅವರು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ದಿನಾಚರಣೆ ಸರಳ ಕಾರ್ಯಕ್ರಮದಲ್ಲಿ ಕಚೇರಿಯ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದರು. ಕಚೇರಿ ಆವರಣದಲ್ಲಿ 150 ಕ್ಕೂ ಅಧಿಕ ಸಸಿಗಳನ್ನು ನೆಡುವುದಾಗಿ ತಿಳಿಸಿದರು. ಈ ಎಲ್ಲಾ ಸಸಿಗಳ ಜವಾಬ್ದಾರಿಯನ್ನು ಮಾತೃ ಇಲಾಖೆಯ ಸಿಬ್ಬಂದಿಗಳಿಗೆ ದತ್ತು ನೀಡುವುದಾಗಿ ತಹಶಿಲ್ದಾರ ತಿಳಿಸಿದರು. ಗ್ರೇಡ್-2 ತಹಸೀಲ್ದಾರ ಮುರಳಿಧರ, ಕಂದಾಯ ನಿರೀಕ್ಷಕರಾದ ಶರಣಯ್ಯ ನಿಡಗುಂದಿಮಠ, ಉಮೇಶಗೌಡ, ಸತೀಶ ಜೀ, ಶರಣಪ್ಪ ದಾಸರ, ವೇಲಪ್ಪಣ್ಣ ಕರಮುಡಿ, ರಾಜೇಶ್ವರಿ, ಭೂಮಾಪನ ಇಲಾಖೆ ಹನುಮಂತಪ್ಪ ಕುದರಿ, ಶರಣಪ್ಪ ಹುಡೇದ, ಬಸವರಾಜ ಚಿನ್ನೂರು, ಮೌನೇಶ, ಸಂಗಮೇಶ, ಮನೋಜ ಎಲಿಗಾರ, ಅನ್ವರ್, ರಾಜಾಭಕ್ಷಿ , ಶಶಿಕಲಾ, ನಿರ್ಮಲಾ ಎಂ, ಡಿ.ಮಾರುತಿ, ಪ್ರತಿಭಾ ಗಂಜಿ, ಸಿದ್ದಯ್ಯ ಹಾಗೂ ಕಂದಾಯ, ಭೂಮಾಪನ, ಸಬ್ ರಜಿಸ್ಟರ್ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.