ಶರಣು ನಿಂಗಲಬಂಡಿ
ಕೃಷಿಪ್ರಿಯ ನ್ಯೂಸ್ |
ಸಂಡೂರು : ಶ್ರೀ ವಿವೇಕಾನಂದರ ದೇಶಭಕ್ತಿ ಮತ್ತು ಮಾತೃ ದೇಶದ ಕಾಳಜಿ ಅವರ ಬದುಕಿನ ತತ್ವ ಆದರ್ಶಗಳು ಯುವಕರಿಗೆ ಮಾದರಿಯಾಗಿದೆ ಎಂದು ನಿರ್ದೇಶಕ ಡಾ.ರವಿ.ಬಿ. ಅವರು ಹೇಳಿದರು.
ಅವರು ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಶುಕ್ರವಾರ ಜರುಗಿದ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಯುವ ಪೀಳಿಗೆ ಇಂತಹ ಮಹಾನ್ ಚೇತನಗಳ ಸಾಧನೆಯ ಪಥಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಸುಂದರ, ಸಮೃದ್ಧ ರಾಷ್ಟ್ರವನ್ನು ಕಟ್ಟುವಲ್ಲಿ ಯುವಕರು ಮುಂದಾಗಬೇಕು ಎಂದರು.
ನಂದಿಹಳ್ಳಿಯಲ್ಲಿ ಕೇಂದ್ರ ಸುವರ್ಣ ಮಹೋತ್ಸವವನ್ನು ಈ ವರ್ಷ ಆಚರಿಸಲಿದ್ದು. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ನೀವು ಕೂಡ ಉತ್ತಮ ಕಲಿಕೆಯೊಂದಿಗೆ ಜೀವನದಲ್ಲಿ ಮುಂದೆ ಬನ್ನಿ ಎಂದರು ಕರೆ ನೀಡಿದರು.
ಇದೇ ವೇಳೆ ಎನ್ಎಸ್ಎಸ್ ಘಟಕದ ವತಿಯಿಂದ ಮೈ ಭಾರತ್ ಯುವ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳ ನೋಂದಣಿ ಹಾಗೂ ವಿವೇಕಾನಂದ ಜಯಂತಿ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಹೊನ್ನೂರ್ ಸ್ವಾಮಿ, ಡಾ. ಚೌಡಪ್ಪ, ಡಾ.ಕೆ.ಜಿ. ಸುಮಾ, ಡಾ. ಬಸವರಾಜ ಹಟ್ಟಿ, ಕ್ರೀಡಾ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ, ಡಾ. ಮಲ್ಲಯ್ಯ, ರಮೇಶ್ ರಾಯಚೂರ್, ಡಾ.ಮಹೇಶ್, ಡಾ.ನಾಗರಾಜ್, ಡಾ.ಬಡೇ ಲಡಕು, ಸತೀಶ್ ಕುಮಾರ್, ಡಾ. ಶಂಕರ ದಳವಾಯಿ, ಗೀತಾ, ರಶ್ಮಿ, ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.