ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ತಾಲೂಕಿನ ವಣಗೇರಿ ಹತ್ತಿರದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಟೋಲ್ ಪ್ಲಾಜಾ ಬಳಿ ಬೊಲೇರೋ ವಾಹನ ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿ ಬೈಕ ಸವಾರ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ಸಂಭವಿಸಿದೆ.
ತಾಲೂಕಿನ ವಣಗೇರಿ ಗ್ರಾಮದ 20 ವಯಸ್ಸಿನ ಶಿವಪ್ಪ ಎನ್ನುವ ವ್ಯಕ್ತಿ ಗಾಯಗೊಂಡ ಬೈಕ್ ಸವಾರ ಎನ್ನಲಾಗಿದೆ. ಟೋಲ್ ಪ್ಲಾಜಾ ಕಡೆಗೆ ಬೈಕ್ ಚಲಾಯಿಸಿಕೊಂಡು ಹೊರಟಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಬೊಲೇರೋ ವಾಹನ, ಬೈಕ್’ಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಬೈಕ್ ಸವಾರನ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದ್ದು ಇಳಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಕುಷ್ಟಗಿ ಪೊಲೀಸರು ಜಖಂಗೊಂಡ ಬೈಕ್ ಹಾಗೂ ಬೊಲೇರೋ ವಾಹನವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.