ಮುನೇತ್ರ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಪಟ್ಟಣದ ಪುರಾತನ ಆರಾಧ್ಯ ದೈವ ಶ್ರೀ ಅಡವಿಮುಖ್ಯ ಪ್ರಾಣ ದೇವರ ಮಂದಿರದ ಜಾತ್ರಾಮಹೋತ್ಸವ ಹಿನ್ನೆಲೆ ಮಂಗಳವಾರ ಸಂಜೆ ದೇವಸ್ಥಾನದ ಪ್ರಾಂಗಣದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ದುರ್ಗಾದೀಪ ನಮಸ್ಕಾರ ಪೂಜೆ ನೆರವೇರಿಸಲಾಯಿತು.
ಮಂತ್ರಾಲಯದ ಶ್ರೀ ಸುಶಮೀಂದ್ರ ತೀರ್ಥರ ಕರಕಮಲ ಸಂಜಾತರಾದ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಶ್ರೀ ದುರ್ಗಾದೀಪ ನಮಸ್ಕಾರ ಪೂಜೆ ವಿಧಿವಿಧಾನಗಳು ಜರುಗಿದವು. ಇದಕ್ಕೂ ಮುಂಚೆ ಸಂಜೆ 7ಗಂಟೆಯಿಂದ ಶ್ರೀ ಸುವಿದ್ಯೇಂದ್ರ ತೀರ್ಥರಿಂದ ‘ಭಾಗವತ ಸಪ್ತಮ ಸ್ಕಂದ’ ಪ್ರವಚನ ನಡೆಯಿತು. ಈ ಸಂದರ್ಭದಲ್ಲಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳು ಸೇರಿದಂತೆ ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಹಾಜರಿದ್ದರು.
ಬೆಳಿಗ್ಗೆ ದೇವಸ್ಥಾನದಲ್ಲಿ ಅಡವಿಮುಖ್ಯ ಪ್ರಾಣದೇವರಿಗೆ ಮಧುಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷ ಪೂಜೆಗಳು, ಮಧ್ಯಾಹ್ನ ತೀರ್ಥ ಪ್ರಸಾದ ಹಾಗೂ ರಾತ್ರಿ ಬಲಿಪ್ರಧಾನ ಪಲ್ಲಕ್ಕಿ ಸೇವಾ, ಮಹಾಮಂಗಳಾರತಿ ಹಾಗೂ ತೊಟ್ಟಿಲು ಸೇವೆ ನಡೆಯಿತು.