– ಕುಷ್ಟಗಿ ವಕೀಲರ ಸಂಘದ ಅಧ್ಯಕ್ಷರಾಗಿ ವೆಂಕಟೇಶ ಈಳಗೇರ ಆಯ್ಕೆ..!

 

(ನೂತನ ಅಧ್ಯಕ್ಷ ವೆಂಕಟೇಶ ಈಳಗೇರ)

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾಗಿ ವೆಂಕಟೇಶ ಈಳಗೇರ ಆಯ್ಕೆಯಾಗಿದ್ದಾರೆ..!
ಸಂಘದ ಸದಸ್ಯರು ಹಾಗೂ ಚುನಾವಣಾಧಿಕಾರಿಗಳು ಸಭೆ ಸೇರಿ ಒಂದು ವರ್ಷದ ಅವಧಿಗೆ ಸರ್ವಾನುಮತದಿಂದ ವೆಂಕಟೇಶ ಈಳಗೇರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಕಾರ್ಯಾಧ್ಯಕ್ಷರಾಗಿ ಡಿ.ಮಾರುತಿ ಉಪಾಧ್ಯಕ್ಷರಾಗಿ ಚಂದ್ರಶೇಖರ ಉಪ್ಪಿನ್ ಕಾರ್ಯದರ್ಶಿಯಾಗಿ ಪರಶುರಾಮ ಬಚನ್ನವರ ಜಂಟಿ ಕಾರ್ಯದರ್ಶಿಯಾಗಿ ರವಿ ಕಂದಗಲ್ಲ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ವಕೀಲರಾದ ಅಯ್ಯಪ್ಪ ಪಲ್ಲೇದ, ರಾಜು ಗಂಗನಾಳ, ಎಮ್.ಎಚ್.ಗೋಡಿ, ಡಿ.ಎಸ್.ಪಾಟೀಲ್, ಎಚ್.ಬಿ.ಕುರಿ, ವಿರೇಶ ನಾಲತವಾಡ, ಶಿವಕುಮಾರ ದೊಡ್ಡಮನಿ, ಮಾರುತಿ ಗುರಿಕಾರ, ಹುಲಗಪ್ಪ ಚೂರಿ ಸೇರಿದಂತೆ ಇನ್ನಿತರರಿದ್ದರು..!!