ಕೊಪ್ಪಳ : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಗೆ ಸದಸ್ಯರಾಗಿ ಕೊಪ್ಪಳದ ಶ್ರೀ ರಾಜೀವ ಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿನೋದ ಹೂಲಿ ನೇಮಕಗೊಂಡಿದ್ದಾರೆ.
ವಿಶ್ವ ವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವ ಡಾ.ಎಸ್.ಸಿ.ಪಾಟೀಲ ಅವರು ಎರಡು ವರ್ಷದ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸದರಿಯವರ ನೇಮಕಕ್ಕೆ ಸಂಸ್ಥೆ ಅಧ್ಯಕ್ಷ ಕರಿಯಣ್ಣ ಸಂಗಟಿ, ಉಪಾಧ್ಯಕ್ಷೆ ರುದ್ರಮ್ಮ ಸಂಗಟಿ, ಸಂಯೋಜಕ ಬಾಳಪ್ಪ ಸಂಗಟಿ ಆಡಳಿತಾಧಿಕಾರಿ ಮಹಾಂತೇಶ ಸಂಗಟಿ ಹಾಗೂ ಸಮಸ್ತ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.