– ರಾಮಾಯಣದ ಭ್ರಷ್ಟಾಚಾರಕ್ಕೆ ಆಧುನಿಕ ಟ್ವಿಸ್ಟ್..!

    ಅಯೋಧ್ಯೆ ಸಾಮ್ರಾಜ್ಯದ ಮಹಾರಾಜ ಶ್ರೀರಾಮಚಂದ್ರ ಒಂದು ದಿನ ತಮ್ಮ ಅರಮನೆಯ ಆವರಣದಲ್ಲಿ ವಿಹಾರದಲ್ಲಿದ್ದಾಗ ಅವರಿಗೆ ಗಿಡದಿಂದ ಗಿಡಕ್ಕೆ ಹಾರಾಡುತ್ತಿದ್ದ ಹನುಮಂತ (ಜಾಂಬವಂತ) ಕಾಣಿಸಿದನಂತೆ. ಅವನನ್ನು ನೋಡಿ ಅರೆ.. ನೀನು ಇನ್ನೂ ಯಾಕೆ ಇಲ್ಲಿಯೇ ಇದ್ದೀಯಾ.? ವಾಪಸು ಕಿಷ್ಕಿಂಧೆಗೆ ಹೋಗಿಲ್ಲವೇ.? ಎಂದು ಕೇಳಿದನಂತೆ. ಅದಕ್ಕೆ ಹನುಮಂತ ಇಲ್ಲ ಸ್ವಾಮಿ, ನಾನು ಸಂಜೀವಿನಿ ತಂದುಕೊಟ್ಟ ಟಿಎ ಡಿಎ ಬಿಲ್ ಇನ್ನೂ ಸೆಟ್ಲಮೆಂಟ್ ಆಗಿಲ್ಲ ಎಂದನಂತೆ. ಅದಕ್ಕೆ ಶ್ರೀರಾಮನಿಗೆ ಸಿಟ್ಟು ಬಂತಂತೆ. ಹನುಮಂತನಂತಹ ವೀರನ ಧೀರನ ಬಿಲ್‌ ಸೆಟ್ಲ್‌ ಆಗಿಲ್ಲ ಎಂದರೆ ಇನ್ನೂ ಯಾರ ಬಿಲ್ ಸೆಟ್ಲ್ ಆಗುತ್ತದೆ ಎಂದು ಮಂತ್ರಿಯನ್ನು ಕರೆದು, ತಕ್ಷಣವೇ ಹನುಮಂತನ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ. ಮಂತ್ರಿ ಆಯ್ತು ತಕ್ಷಣವೇ ಮಾಡಿಸುತ್ತೇನೆ ಎಂದು ಭರವಸೆ ನೀಡಿದ. ನಂತರ ಸುಮಾರು 3–4 ತಿಂಗಳು ಕಳೆದ ನಂತರವೂ ಹನುಮಂತ ಅರಮನೆ ಆವರಣದಲ್ಲಿ ತಿರುಗಾಡುವುದು ನಿಲ್ಲಲಿಲ್ಲ. ಮತ್ತೆ ಅವನನ್ನು ಕಂಡ ಶ್ರೀರಾಮಚಂದ್ರ ಯಾಕೆ ಇನ್ನೂ ಇಲ್ಲೇ ಇದ್ದೀಯಾ..? ಎಂದು ಕೇಳಿದಾಗ ಹನುಮಂತ ‘ಇಲ್ಲ ಇನ್ನೂ ನನ್ನ ಬಿಲ್ ಬಂದಿಲ್ಲ ಎಂದನಂತೆ’. ಆಗ ರಾಮನ ಸಿಟ್ಟು ಇನ್ನೂ ಹೆಚ್ಚಾಯಿತು. ಮತ್ತೆ ಮಂತ್ರಿಯನ್ನು ವಿಚಾರಿಸಿದ. ಅದಕ್ಕೆ ಮಂತ್ರಿ ಇಲ್ಲಾ ಸ್ವಾಮಿ ಕೇಸ್  ವರ್ಕರ್ ಕೆಲವು ತಕರಾರು ಎತ್ತಿದ್ದಾನೆ. ಅದಕ್ಕೆ ಬಿಲ್ ಇನ್ನೂ ಪಾಸ್ ಆಗಿಲ್ಲ ಎಂದನಂತೆ. ಏನ್ ತಕರಾರು ಅವಂದು ಎಂದು ಕೇಳಿದ ಶ್ರೀರಾಮ. ‘ಕೇಸ್ ವರ್ಕರ್ ಮೂರು ಪ್ರಶ್ನೆ ಹಾಕಿ ಬಿಲ್ ಪೆಂಡಿಂಗ್ ಇಟ್ಟಿದ್ದಾನೆ. ಮೊದಲನೆಯ ಪ್ರಶ್ನೆ, ಸಂಜೀವಿನಿ ತರುವಂತೆ ಹನುಮಂತನಿಗೆ ಸೂಚಿಸಿದವನು ಶ್ರೀರಾಮ, ಆದರೆ ರಾಮ ಆಗ ಅಯೋಧ್ಯೆಯ ರಾಜ ಆಗಿರಲಿಲ್ಲ. ರಾಜನಲ್ಲದ ಯಾರೋ ವ್ಯಕ್ತಿ ಹೇಳಿದ ಕೆಲಸವನ್ನು ಮಾಡಿದರೆ ಅದಕ್ಕೆ ಬಿಲ್ ಕೊಡಲು ನಿಯಮದಲ್ಲಿ ಅವಕಾಶ ಇಲ್ಲ. ಅಲ್ಲದೆ, ಹನುಮಂತ ‘ಡಿ’ ದರ್ಜೆ ನೌಕರ. ‘ಡಿ’ ದರ್ಜೆ ನೌಕರರಿಗೆ ವಾಯುಮಾರ್ಗದಲ್ಲಿ ಹೋಗಲು ಎಲಿಜಿಬಿಲಿಟಿ ಇಲ್ಲ. ಇದಲ್ಲದೆ ಹನುಮಂತನಿಗೆ ಸಂಜೀವಿನಿ ಮಾತ್ರ ತರಲು ಹೇಳಿದ್ದು. ಆದರೆ, ಅವನು ಇಡೀ ಸಂಜೀವಿನಿ ಪರ್ವತವನ್ನೇ ತಂದಿದ್ದಾನೆ. ಇದು ಅನವಶ್ಯಕ ಖರ್ಚು. ಆದ್ದರಿಂದ ಬಿಲ್ ಪಾಸ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾನೆ’ ಎಂದ ಮಂತ್ರಿ. ಇದನ್ನು ಕೇಳಿದ ರಾಮ ತಲೆ ಮೇಲೆ ಕೈಹೊತ್ತು ‘ಏನಾದ್ರೂ ಮಾಡಿ ತಕ್ಷಣವೇ ಹನುಮಂತನ ಬಿಲ್ ಪಾಸ್ ಮಾಡಿಸಿ’ ಎಂದು ಸೂಚಿಸಿದನಂತೆ. ನಂತರ ಮಂತ್ರಿ ಹನುಮಂತನಿಗೆ ‘ನಿನ್ನ ಬಿಲ್ ಪಾಸಾಗಬೇಕು ಎಂದರೆ ಕೇಸ್ ವರ್ಕರ್ ಭೇಟಿ ಮಾಡಿ ಅವನನ್ನು ನೋಡಿಕೊ’ ಎಂದು ಸಲಹೆ ಮಾಡಿದನಂತೆ. ಅದರಂತೆ ಹನುಮಂತ ಕೇಸ್ ವರ್ಕರ್ ಭೇಟಿ ಮಾಡಿ ‘ಬಿಲ್ ಪಾಸಾದರೆ ಅದರ ಪರ್ಸೆಂಟೇಜ್ ಇಂತಿಷ್ಟು ಕೊಡುತ್ತೇನೆ’ ಎಂದಾಗ ಕೇಸ್ ವರ್ಕರ್‌ ‘ಸಂಜೆಯೇ ಬಂದು ಬಿಲ್ ತೆಗೆದುಕೊಂಡು ಹೋಗು’ ಎಂದನಂತೆ. ‘ಅರೇ ನೀವು ಅದೇನೋ ತಕರಾರು ಹಾಕಿದ್ದೀ ರಂತಲ್ಲ’ ಎಂದು ಕೇಳಿದಾಗ ಕೇಸ್ ವರ್ಕರ್ ‘ಅದೆಲ್ಲಾ ಏನೂ ಇಲ್ಲ. ನಿನಗೆ ಸಂಜೀವಿನಿ ತರಲು ಹೇಳಿದಾಗ ರಾಮ ಅಯೋಧ್ಯೆಯ ರಾಜನಾಗಿರಲಿಲ್ಲ ಎನ್ನುವುದು ತಾನೆ. ಆಗ ಅಯೋಧ್ಯೆಗೆ ರಾಜರೇ ಇರಲಿಲ್ಲ. ರಾಮನ ಪಾದುಕೆ ಸಿಂಹಾಸನದ ಮೇಲಿತ್ತು. ಅದಕ್ಕಾಗಿ ರಾಮನೇ ರಾಜ ಎಂದು ಪರಿಗಣಿಸಿ ರಾಮ ಹೇಳಿದ್ದನ್ನು ಮಾಡಬಹುದು. ಇನ್ನು ನೀನು ‘ಡಿ’ ದರ್ಜೆ ನೌಕರ. ನಿನಗೆ ವಾಯುಮಾರ್ಗ ದಲ್ಲಿ ಹೋಗುವುದಕ್ಕೆ ಅನುಮತಿ ಇಲ್ಲ ಎನ್ನುವುದು. ತುರ್ತು ಸಂದರ್ಭದಲ್ಲಿ ಯಾರನ್ನು ಬೇಕಾದರೂ ವಾಯುಮಾರ್ಗದಲ್ಲಿ ಕಳಿಸಬಹುದು. ಮೂರನೆಯದ್ದು, ನೀನು ಸಂಜೀವಿನಿ ಪರ್ವತವನ್ನೇ ಯಾಕೆ ತಂದೆ ಎನ್ನುವುದು ತಾನೆ, ನೀನೇನು ಸಸ್ಯಶಾಸ್ತ್ರಜ್ಞ ಅಲ್ಲವಲ್ಲ, ನಿನಗೆ ಸಂಜೀವಿನಿ ಸಸ್ಯ ಯಾವುದು ಎನ್ನುವುದು ಗೊತ್ತಿಲ್ಲ. ಆದರೆ ಲಕ್ಷ್ಮಣನ ಜೀವ ಮುಖ್ಯ ಎಂದು ನೀನು ಸಂಜೀವಿನಿ ಪರ್ವತವನ್ನೇ ತಂದೆ. ಅದಕ್ಕಾಗಿ ನಿನ್ನ ಬಿಲ್ ಪಾಸ್ ಮಾಡಬಹುದು ಎಂದನು. ಈ ಮೇಲಿನ ಕಥೆಯಲ್ಲಿ ದೇಶದ ಪೀಡಗಾಗಿರುವ ಭ್ರಷ್ಟಾಚಾರ ವಿಡಂಬನೆಯನ್ನು ತ್ರೈತಾಯುಗದಲ್ಲಿ ನಡೆಯಲಾಗಿದೆ ಎನ್ನಲಾದ ರಾಮಾಯಣದ ಶ್ರೀರಾಮಚಂದ್ರ ಹಾಗೂ ಇತನ ದೂತ ಹನುಮನ ಕುರಿತು ವಿವಿರಣೆ ಮಾತ್ರ ನಿಮಗಾಗಿ..!!
(- ಶರಣಪ್ಪ ಕುಂಬಾರ)
(ಸುದ್ದಿ ಕೃಪೆ : ವಾಟ್ಸಾಪ್ ಮೂಲ)