ಕೊಪ್ಪಳ : ಸೈನ್ಯ ಸೇರಲು ಬಯಸಿ ರಸ್ತೆ ಮೇಲೆ ರನ್ನಂಗಿ (ಓಟ) ತರಬೇತಿ ಪಡೆಯುತ್ತಿದ್ದ ಯುವಕರ ಗುಂಪಿನ ಮೇಲೆ ಕ್ರೂಷರವೊಂದು ಹಾಯ್ದು ಸ್ಥಳದಲ್ಲಿಯೇ ಯುವಕನೊರ್ವ ಸಾವನ್ನಪ್ಪಿದ್ದಾನೆ. ಅಲ್ಲದೆ, ನಾಲ್ವರು ತೀವ್ರ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರು ಪಟ್ಟಣದಲ್ಲಿ ಬೆಳಗ್ಗೆ 5 ಗಂಟೆಗೆ ಜರುಗಿದೆ..!
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಸಂಗಮೇಶ ಬಸವರಾಜ ರೋಣದ (19) ಮೃತಪಟ್ಟಿರುವ ನತದೃಷ್ಟ ಯುವಕ. ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರು ಪಟ್ಟಣದ ‘ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ’ ಎಂಬ ಖಾಸಗಿ ಸಂಸ್ಥೆಯಿಂದ ರನ್ನಿಂಗ್ ತರಬೇತಿ ಪಡೆಯಲು ಬೆಳಗಿನ ಜಾವ 5 ಗಂಟೆ ಸುಮಾರಿಗೆ ರಸ್ತೆ ಮೇಲೆ ಓಡುತ್ತಿದ್ದ ಯುವಕರ ಗುಂಪಿನ ಮೇಲೆ ಕ್ರೂಷರ್ ಹಾಯ್ದು ಹೋಗಿದೆ. ಒಬ್ಬ ಯುವಕ ತೀವ್ರ ಗಾಯಗೊಂಡು ಜೀವನ ಮರಣದ ಹೋರಾಟದಲ್ಲಿದ್ದಾನೆ. ಮೂರು ಜನ ಯುವಕರ ಕಾಲುಗಳಿಗೆ ತೀವ್ರ ಪೆಟ್ಟಾಗಿರುವ ಕುರಿತು ಮೃತನ ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
ಸೈನ್ಯ ಸೇರಬೇಕು. ಭಾರತ ಮಾತೆಯ ಸೇವೆ ಮಾಡಬೇಕೆಂದು ಮಹದಾಸೆ ಹೊಂದಿದ್ದ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಸಂಗಮೇಶ ಬಸವರಾಜ ರೋಣದ ಸೇರಿದಂತೆ ತೀವ್ರ ಗಾಯಗೊಂಡಿರುವ ನಾಲ್ವರ ಯುವಕರ ಕನಸು ಮಾತ್ರ ನುಚ್ಚು ನೂರಾಗಿರುವುದಂತು ಸತ್ಯ.
ಸ್ಮಶಾನ ಮೌನ : ಮೃತಪಟ್ಟ ಯುವಕನ ಸ್ವಗ್ರಾಮ ಹನುಮನಾಳದಲ್ಲಿರುವ ಮನೆ ಸೇರಿದಂತೆ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ. ಮಗ ತರಬೇತಿ ಪಡೆದು, ದೇಶ ಸೇವೆ ಮಾಡಬೇಕು ಎಂಬ ಕನಸು ಕಂಡಿದ್ದ ಯುವಕನ ತಂದೆ ಬಸವರಾಜ ರೋಣದ ಸೇರಿದಂತೆ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ. ಸಂಗಮೇಶ ರೋಣದನನ್ನು ಕಳೆದುಕೊಂಡ ಹನುಮನಾಳ ಗ್ರಾಮದ ಇಡೀ ಗೆಳೆಯರ ಬಳಗವು ಕಂಬಿನಿ ಮಿಡಿದಿದ್ದಾರೆ..!!
Miss you brother