ಕೊಪ್ಪಳ : ವಿಧಾನ ಪರಿಷತ್ ಚುನಾವಣೆಯಿಂದ ಹಿಂದೆ ಸರಿದಿರುವ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಅವರ ಮುಂದಿನ ‘ಜಾಣತನ’ ದ ನಡೆಯು ಜಿಲ್ಲೆಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ..!? ಕಳೆದ ಚುನಾವಣೆಯಲ್ಲಿ ಕೇವಲ 324 ಮತಗಳ ಅಂತರದಲ್ಲಿ ಪರಾಭವಗೊಂಡಿರುವ ಸಿವಿಸಿ ಅವರು ಈ ಬಾರಿಯ ಚುನಾವಣೆಯಿಂದ ಹಿಂದೆ ಸರಿದಿರುವ ನಡೆಯ ಬಗ್ಗೆಯೇ ಜಿಲ್ಲೆಯ ತುಂಬಿಲ್ಲಾ ಚರ್ಚಾ ವಿಷಯವಾಗಿದೆ. ಬಿಜೆಪಿ ಆಂತರಿಕ ವಲಯದ ಮಾಹಿತಿ ಪ್ರಕಾರ ರಾಜ್ಯ ನಾಯಕರಿಂದ ಹಿಡಿದು, ರಾಯಚೂರು-ಕೊಪ್ಪಳ ಅವಳಿ ಜಿಲ್ಲೆಗಳ ಬಿಜೆಪಿ ನಾಯಕರದ್ದು , ಕಳೆದ ಬಾರಿ ಪರಾಭವಗೊಂಡಿರುವ ಸಿವಿಸಿ ಅವರಿಗೆ ಟಿಕೆಟ್ ನೀಡುವ ಒಮ್ಮತದ ಅಭಿಪ್ರಾಯವಿತ್ತು. ಯಾವ ನಾಯಕರಿಂದಲೂ ವಿರೋಧದ ಪ್ರಶ್ನೆ ಇದ್ದಿಲ್ಲವೆಂಬುದು ಕೇಳಿಬಂದಿದೆ. ಇಷ್ಟಾಗಿಯೂ ಸ್ಪರ್ಧೆಯಿಂದ ಹಿಂದೇಟು ಹಾಕಿರುವ ಸಿವಿಸಿಯವರ ನಡೆ ಮಾತ್ರ ಯಾವ ದಿಕ್ಸೂಚಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸ್ಪರ್ಧೆಯಿಂದ ಹಿಂದೆ ಸರಿದರು ಕೂಡಾ ಹೆಚ್ಚಿನ ಜವಾಬ್ದಾರಿ ಜೊತೆಗೆ ಪಕ್ಷದ ಅಭ್ಯರ್ಥಿಯ ಫಲಿತಾಂಶದ ಹೊಣೆಗಾರಿಕೆ ಸಿವಿಸಿ ಹೆಗಲ ಮೇಲೆ ಬೀಳಲಿದೆ. ಮೂಲತಃ ‘ಸಿವಿಲ್ ಇಂಜನೀಯರ’ ಹಿರಿಯ ಹುದ್ದೆ ನಿಭಾಯಿಸಿದ ಸಿ.ವಿ.ಚಂದ್ರಶೇಖರ ಅವರು ಮುಂಬರುವ ರಾಜಕೀಯ ಅಖಾಡಕ್ಕೆ ಯಾವ ತರಹದ ‘ಬ್ಲೂ ಪ್ರಿಂಟ್’ ಸಿದ್ಧಮಾಡಿಕೊಂಡಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ..!!
ಸಿವಿಸಿ ನಡೆ ಪ್ರಶ್ನೆಯಾಗಿದೆ..!? : ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಸ್ಪರ್ಧಿಸುವ ಉದ್ದೇಶವೇ ಚುನಾವಣೆಯಿಂದ ಹಿಂದೆ ಸರಿಯಲು ಮುಖ್ಯ ಕಾರಣವಾಗಿತಾ..? ಅಥವಾ ಚುನಾವಣೆ ರಾಜಕೀಯ ಈಗಾಗಲೇ ಬೇಸರ ತಂದಿತಾ ಇತ್ಯಾದಿ ಡಾಲರ್ ಪ್ರಶ್ನೆಗಳು ಕಮಲ ಪಕ್ಷದವರಿಗೆ ಅಷ್ಟೇ ಅಲ್ಲ , ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಪಕ್ಷದವರನ್ನು ಕೂಡಾ ನಿದ್ದೆಗೆಡಿಸಿದೆ..!