– ಕಳಪೆ ಊಟ ತಿರಸ್ಕರಿಸಿ ಹೊರನಡೆದ ಗಂಗಾವತಿ ಹಾಸ್ಟೆಲ್ ವಿದ್ಯಾರ್ಥಿಗಳು..!

 

 

 

– ಶರಣಪ್ಪ ಕುಂಬಾರ

ಕೊಪ್ಪಳ : ವಸತಿ ನಿಲಯದಲ್ಲಿನ ಕಳಪೆ ಮಟ್ಟದ ಆಹಾರ ತಿರಸ್ಕರಿಸಿ, ಹೊರನಡೆದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಗಂಗಾವತಿ ನಗರದ ಲಲಿತ ಮಹಲ್ ಕ್ಯಾಂಟೀನನಲ್ಲಿ ಸವಿದ ಘಟನೆ ಗಂಗಾವತಿ ನಗರದಲ್ಲಿ ಜರುಗಿದೆ..!
ಜಿಲ್ಲೆಯ ಗಂಗಾವತಿ ನಗರದ ಆನೆಗೊಂದಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ (ಅಂಬೇಡ್ಕರ್) ನಿಲಯದಲ್ಲಿ ನೀಡುವ ಆಹಾರದಲ್ಲಿ ಒಂದಿಲ್ಲೊಂದು ಸಮಸ್ಯೆಯಾಗಿರುತ್ತದೆ. ಸರಿಯಾದ ಅಕ್ಕಿ ಬಳಸುವುದು ಸೇರಿದಂತೆ ಕಳಪೆಮಟ್ಟದಿಂದ ಕೂಡಿದ ದವಸ ದಾನ್ಯಗಳನ್ನು ಆಹಾರದಲ್ಲಿ ಬಳಸಲಾಗುತ್ತಿದೆ. ಕಳಪೆ ಆಹಾರ ನೀಡುವುದನ್ನು ಈ ಹಿಂದೆಯೇ ಖಂಡಿಸಲಾಗಿತ್ತು. ಆದಾಗ್ಯೂ 14-11-2021 ರಂದು ಮಧ್ಯಾಹ್ನದ ಊಟವು ಸೇವಿಸಲು ಯೋಗ್ಯವಿಲ್ಲವೆಂದು ಊಟ ಬಹಿಷ್ಕರಿಸಿ ಹೊರಬಂದು ಕ್ಯಾಂಟೀನನಲ್ಲಿ ಮಾಡಲಾಗಿದೆ. ಇಲಾಖೆ ನಿಗದಿಪಡಿಸಿದ ಊಟದ ಮೇನು ಪ್ರಕಾರ ವಸತಿ ನಿಲಯದಲ್ಲಿ ಯಾವುದನ್ನು ನೀಡುತ್ತಿಲ್ಲವೆಂದು ನೊಂದ ವಿದ್ಯಾರ್ಥಿಗಳು ಪತ್ರಿಕೆಗೆ ತಿಳಿಸಿದರು..!!