– ಕಾಂಗ್ರೆಸ್‌ನವರಿಗೆ ಬೇರೆ ಯಾವ ಕೆಲಸವಿಲ್ಲ : ಸಚಿವ ಹಾಲಪ್ಪ ಆಚಾರ..!

ಸಂಗಮೇಶ ಮುಶಿಗೇರಿ

ಕೊಪ್ಪಳ (ಕುಷ್ಟಗಿ) : ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಏನು ಕೆಲಸವಿಲ್ಲ. ಹೀಗಾಗಿ ಬಿಟ್‌ ಕಾಯಿನ್ ಬಗ್ಗೆ ಇಲ್ಲದ ಆರೋಪ ಮಾಡುತ್ತಿದ್ದಾರೆ. ತಮ್ಮಲ್ಲಿ ಕಪ್ಪು ಹಣದ ಬಗ್ಗೆ ಮಾಹಿತಿ ಇದ್ದರೆ, ದಾಖಲೆಗಳಿದ್ದರೆ ಕಾನೂನು ಮೊರೆ ಹೋಗಲಿ ನ್ಯಾಯ ಕೇಳಲಿ ದೇಶದಲ್ಲಿ ಮುಕ್ತ ಅವಕಾಶವಿದೆ. ಯಾವ ಆಧಾರವಿಲ್ಲದೇ ಏನಾದರೂ ಆಪಾದನೆ ಮಾಡಿ ಜನರನ್ನು ದಾರಿತಪ್ಪಿಸುವ ನಿಟ್ಟಿನಲ್ಲಿ  ಆರೋಪ ಮಾಡುವುದು ಕಾಂಗ್ರೆಸ್‌ನವರಿಗೆ ಮೊದಲಿನಿಂದಲು ರೂಢಿಯಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.
   ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಬಳಿಕ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೋಸ್ಕರ ಕೇಂದ್ರ ಸರ್ಕಾರದ ಮಂತ್ರಿಗಳನ್ನು, ಅಧಿಕಾರಿಗಳನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದರು. ಮುಖ್ಯಮಂತ್ರಿ ಆದವರು ರಾಜ್ಯದ ನೂರಾರು ಅಭಿವೃದ್ಧಿ ಕಾರ್ಯಗಳಿಗಾಗಿ ಭೇಟಿ ನೀಡುವುದು ಸಹಜ ಅದರಲ್ಲಿ ತಪ್ಪೇನಿದೆ. ಅವರು ದೆಹಲಿಗೆ ಹೋಗಬಾರದೆ..? ಎಂದು ಪ್ರಶ್ನಿಸಿದರು.
 ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ತಮ್ಮ ವಯಕ್ತಿಕ ಕಾರ್ಯಕ್ಕಾಗಿ ದೆಹಲಿಗೆ ಹೋಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಬದಲಾವಣೆ ಎಂಬುವ ಪ್ರಶ್ನೆಯೇ ಇಲ್ಲ. ೨೦೨೩ರ ವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರೇ ಮುಂದುವರೆಯಲಿದ್ದಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.
ಸಂಸದ ಸಂಗಣ್ಣ ಕರಡಿ ಸೇರಿದಂತೆ ಇನ್ನಿತರರಿದ್ದರು.