– ಶರಣಪ್ಪ ಕುಂಬಾರ
ಕೊಪ್ಪಳ : ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರುಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರೇ ಕಣದಲ್ಲಿದ್ದರು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಮತ್ತು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಇವರುಗಳ ಮಧ್ಯದಲ್ಲಿ ನಡೆಯುವ ಮಹಾ ಸಮರ ಎಂಬ ಮಾತುಗಳು ಅವಳಿ ಜಿಲ್ಲೆಗಳಲ್ಲಿ ಕೇಳಿಬರುತ್ತಿವೆ..!
ಈಗಾಗಲೇ ಕಾಂಗ್ರೆಸ್ ಪಕ್ಷವು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರ ಸಹೋದರನ ಪುತ್ರ ಶರಣೇಗೌಡ ಪಾಟೀಲ ಬಯ್ಯಾಪೂರು ಎಂಬುವರಿಗೆ ಟಿಕೇಟ್ ಪೈನಲ್ ಮಾಡಿ ಅಧಿಕೃತ ಘೋಷಣೆ ಮಾಡಿದೆ. ಆದರೆ, ಕೆಸರಿ ಪಕ್ಷ ಮಾತ್ರ ಕಾದು ನೋಡುವ ಹಾಗೂ ಅಳೆದು, ತೂಗುವ ತಂತ್ರಗಾರಿಕೆಯಲ್ಲಿ ತಲ್ಲಿಣವಾಗಿದೆ. ಟಿಕೇಟ್ ಯಾರಿಗೆ ನೀಡಿದರೇ… ಗೆಲುವು ಆಗುವುದು ಸೇರಿದಂತೆ ಮುಂಬರುವ ದಿನಗಳಲ್ಲಿ ಪಕ್ಷದ ವರ್ಚಸ್ಸು , ಆಗು ಹೋಗುಗಳು ಸೇರಿದಂತೆ ಜಾತಿ ಮತಗಳ ಲೆಕ್ಕಾಚಾರದಲ್ಲಿ ಬಿಜೆಪಿಗರು ಬ್ಯೂಜಿ ಆಗಿದ್ದಾರೆ. ಶ್ರೀ ರಾಮಚಂದ್ರನ ಲೆಕ್ಕಾಚಾರದಲ್ಲಿರುವ ಕಮಲ ಪಡೆಗೆ ಸೂಕ್ತ ಅಭ್ಯರ್ಥಿ ಎನ್ನುವ ಮೂಲಕ ಕೈ ನಾಯಕರು ‘ರಡ್ಡಿ ಸಮುದಾಯದ’ ಶರಣೇಗೌಡ ಪಾಟೀಲ ಬಯ್ಯಾಪೂರು ಎಂಬ ಹುರಿಯಾಳನ್ನು ಪ್ರಬಲ ಪೈಪೋಟಿ ನೀಡಲೇಬೇಕು ಎಂಬ ಲೆಕ್ಕಾಚಾರವಿಟ್ಟುಕೊಂಡು ತಯಾರಿಯಲ್ಲಿದ್ದಾರೆ. ಬಿಜೆಪಿಯೂ ಯಾವುದೇ ಸಮುದಾಯದವರಿಗೂ ಟಿಕೇಟ್ ಘೋಷಿಸಿದರು, ಕೂಡಾ ಇದೇ ‘ರಡ್ಡಿ ಸಮುದಾಯದ’ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಕೊಪ್ಪಳದ ಸಿ.ವಿ.ಚಂದ್ರಶೇಖರ ಹಾಗೂ ಶಾಸಕ ಅಮರೇಗೌಡರ ನಡುವೆಯೇ ಕದನ ನಡೆಯುವಂತದ್ದು ಪಕ್ಕಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಕಳೆದ ಬಾರಿ ಅಲ್ಪ ಮತಗಳಿಂದ ಪರಾಭವಗೊಂಡು, ಈಗಾಗಲೇ ಟಿಕೇಟ್ ನಿರಾಕರಿಸಿದ ಸಿ.ವಿ.ಸಿ ಬಿಟ್ಟು ಇನ್ನೂಳಿದ ನಾಯಕರಿಗೆ ಟಿಕೇಟ್ ನೀಡಿದರೂ ಅಭ್ಯರ್ಥಿ ಗೆಲುವು ಸಿ.ವಿ.ಚಂದ್ರಶೇಖರ ಹೆಗಲಿಗೆ ಬೀಳಲಿದೆ ಎಂಬ ಮಾತುಗಳಂತು ಸಾಕಷ್ಟು ಹರಿದಾಡುತ್ತಿವೆ. ಯಾವ ರಾಜಕೀಯ ಲೆಕ್ಕಾಚಾರ ಹಾಕಿದರೂ ಕೂಡಾ ರಾಯಚೂರು-ಕೊಪ್ಪಳ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಒಂದು ಸ್ಥಾನಕ್ಕೆ ಜರುಗುವ ಚುನಾವಣೆ ಮಾತ್ರ ಶಾಸಕ ಬಯ್ಯಾಪೂರು ವಿರುದ್ಧ ಸಿವಿಸಿ ಮಧ್ಯೆ ನಡೆಯುವುದಂತು ಸತ್ಯ. ಆದರೆ, ಈ ಪ್ರಬಲ ಪೈಪೋಟಿಯಲ್ಲಿ ಇಬ್ಬರಲ್ಲಿ ಯಾವ ನಾಯಕರ ಕೈ ಮೇಲಾಗಲಿದೆ ಎಂಬುದು ಮಾತ್ರ ಕುತೂಹಲಕಾರಿ ಸಂಗತಿ..!!
(- ‘ಕೃಷಿ ಪ್ರಿಯ’ ಪತ್ರಿಕೆಯ ವಿಭಿನ್ನ ರಾಜಕೀಯ ವಿಶ್ಲೇಷಣೆಯ ಸುದ್ದಿಗಳು ಮುಂದುವರೆಯಲಿವೆ..!)