– ಚಿರತೆ ದಾಳಿಗೆ ಕುದುರೆ ಬಲಿ..!

 

 

– ಶರಣಪ್ಪ ಕುಂಬಾರ

ಕೊಪ್ಪಳ : ಚಿರತೆಗಳ ದಾಳಿಗೆ ಕಟ್ಟಿ ಹಾಕಿರುವ ಕುದುರೆವೊಂದು ಸಾವುನ್ನಪ್ಪಿದರೆ, ಇನ್ನೊಂದು ಕುದುರೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಜರುಗಿದೆ..!
ಘಟನೆಯು ಜಿಲ್ಲೆಯ ಗಡಿ ತಾಲೂಕಾ ಆಗಿರುವ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪ್ಯಾಟಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಜರುಗಿದೆ. ಹಾಲುಮತದ ಸಮುದಾಯದ ಧರ್ಮಗುರುಗಳಾದ ಸಕ್ರಪ್ಪ ಧರ್ಮರ ಎಂಬುವರಿಗೆ ಕುದುರೆಗಳು ಸೇರಿವೆ. ಘಟನೆಯಿಂದ ಎರಡು ಜಿಲ್ಲೆಗಳ ಗಡಿ ಗ್ರಾಮಗಳಲ್ಲಿನ ಜನಜೀವನ ತಲ್ಲಣಗೊಂಡಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಪಶು ಸಂಗೋಪನೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪೂರು ಗ್ರಾಮಕ್ಕೆ ಹತ್ತಿಕೊಂಡಿರುವುದಲ್ಲದೆ, ಚಿರತೆಗಳು ಕುಷ್ಟಗಿ ತಾಲೂಕಿನ ಮಾಲಗಿತ್ತಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸಂಚರಿಸಿರುವುದು ವಿಶೇಷ..!!