– ಶರಣಪ್ಪ ಕುಂಬಾರ
ಕೊಪ್ಪಳ : ಕಳಪೆ ಹಾಗೂ ವಿಷಯುಕ್ತ ಆಹಾರ ಸೇವಿಸಿ 30 ಕ್ಕೂ ಅಧಿಕ ಮಕ್ಕಳು ಅಸ್ವಸ್ಥತೆಗೊಂಡ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದೆ..!
ಅಸ್ವಸ್ಥತೆಗೊಂಡಿರುವ ವಿದ್ಯಾರ್ಥಿಗಳನ್ನು ಕುಷ್ಟಗಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ವಿಷಯುಕ್ತ ಆಹಾರದ ಜೊತೆಗೆ ಕಳಪೆ ಆಹಾರದ ಬೆಳಗಿನ ಉಪಹಾರ ಸೇವನೆಯಿಂದ ವಿದ್ಯಾರ್ಥಿಗಳು ಅನಾರೋಗ್ಯವಾಗಲು ಮುಖ್ಯ ಕಾರಣವೆನ್ನುತ್ತಾರೆ ಕುಷ್ಟಗಿ ಆಸ್ಪತ್ರೆ ವೈದ್ಯಾಧಿಕಾರಿಗಳು. ಘಟನೆಯಿಂದ ಭಯಗೊಂಡಿರುವ ವಿದ್ಯಾರ್ಥಿಗಳ ಪಾಲಕರು ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ. ಸೂಕ್ತ ತನಿಖೆ ಕೈಗೊಂಡು ಅಧಿಕಾರಿಗಳು ಶಾಲೆಯ ಅವ್ಯವಸ್ಥೆಗೆ ಇತಿ ಶ್ರೀ ಹಾಡಬೇಕಾಗಿರುವುದು ಬಾಕಿ ಇದೆ..!!