ವೈಭವದ ದಾಳಿಂಬೆ ನೆಲದಲ್ಲಿ ‘ಪೆರಲ’ ಪಸರಿಸಲಿ…!

ಪೆರಲ

 

ಕೊಪ್ಪಳ : ವಿಶ್ವ ಮಾರುಕಟ್ಟೆಯಲ್ಲಿ ಕೊಪ್ಪಳದ ದಾಳಿಂಬೆ ಒಂದು ಕಾಲದಲ್ಲಿ ತನ್ನದೆ ಆದ ಚಾಪು ಮೂಡಿಸಿತ್ತು. ಅದರ ಅಷ್ಟೆ, ಚಿನ್ನದ ಬೆಲೆ ಪಡೆದಿತ್ತು. ದುಂಡಾಣು ರೋಗದಿಂದ ಎಲ್ಲಾ ಬೆಳೆ ಈ ಭಾಗದಲ್ಲಿ ನೆಲಕಚ್ಚಿತು. ಆದರೆ, ಇಲ್ಲಿನ ಫಲವತ್ತಾದ ಮಣ್ಣು ಪೆರಲ ಬೆಳೆಯಲು ವೈಜ್ಞಾನಿಕವಾಗಿ ಸೂಕ್ತವಾಗಿರುವುದು ಕೂಡಾ ವಿಶೇಷ.

ಪೇರಲ ಒಂದು ಉಷ್ಣ ವಲಯದ ಬೆಳೆ. ಕಡಿಮೆ ಮಳೆ ಬೀಳುವ ಒಣ ಹವೆಯಿರುವ ಕೊಪ್ಪಳ ಪ್ರದೇಶಕ್ಕೆ ಪೆರಲ ಬೆಳೆಯಲು ಸೂಕ್ತವೂ ಕೂಡಾ ಹೌದಾಗಿದೆ. ಈ ಭಾಗದ ಮಣ್ಣು ಮತ್ತು ವಾತಾವರಣಕ್ಕೆ ಅಂತರ  ಹಾಗೂ ಏಕ ಬೆಳೆಯಾಗಿ ಬೆಳೆಯಬಹುದಾಗಿದೆ. ಮೂಲತಃ ಉತ್ತರಪ್ರದೇಶದ ಬೆಳೆಯಾಗಿರುವ ಪೆರಲ ದೇಶದ ನಾಲ್ಕನೇ ಪ್ರಮುಖ ಹಣ್ಣಿನ ಬೆಳೆ. ಪೆರಲ ಅಥವಾ ಸೀಬೆ ಅಂತಲೂ ಕರೆಯಲ್ಪಡುವ ಈ ಹಣ್ಣಿನಲ್ಲಿ ಸಿ ಜೀವಸತ್ವ ಹೇರಳವಾಗಿರುವುದು ವಿಶೇಷತೆಗಳಲ್ಲೊಂದು ವಿಶೇಷ. ವಿಶೇಷವಾಗಿ ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ಈ ಹಣ್ಣು ರಾಮಬಾಣ. ಹಾಗಾಗಿ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆ ಹೊಂದಿದೆ ಎನ್ನುತ್ತಾರೆ ಕೊಪ್ಪಳದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ.

 

ಸಾಧಾರಣ ಅಲ್ಲದೆ, ಕ್ಷಾರಯುತ ಮಣ್ಣು ಪೆರಲ ಬೆಳೆಗೆ ಅತ್ಯಂತ ಯೋಗ್ಯವಾದದ್ದು. ದಾಳಿಂಬೆ ಬೆಳೆ ಬೆಳೆದು, ಕೈ ಸುಟ್ಟುಕೊಂಡಿರುವ ರೈತರು, ತೋಟಗಾರಿಕೆ ಅಧಿಕಾರಿಗಳ ಸಲಹೆ ಮೇರೆಗೆ ಜಿಲ್ಲೆಗೆ ಅತ್ಯಂತ ಸೂಕ್ತವಾಗಿರುವ ಪೆರಲ ಬೆಳೆಯನ್ನು ಬೆಳೆದು, ತಮ್ಮ ಆದಾಯ ವೃದ್ಧಿಸಿಕೊಳ್ಳಲು ಈಗ ಸೂಕ್ತ ಕಾಲ ಒದಗಿಬಂದಿದೆ. ಈಗಾಗಲೇ ಕೆಲ ರೈತರು ಬೆಳೆಯ ಲಾಭ ಪಡೆಯುತ್ತಿದ್ದು, ಇನ್ನಷ್ಟು ರೈತರು ಪೆರಲ ಬೆಳೆಯಲು ಮುಂದಾಗಬೇಕಾಗಿದೆ. ಅತ್ಯಂತ ಉರಿಬಿಸಿಲಿಗೆ ಹೆಸರಾಗಿರುವ ಕೊಪ್ಪಳ ಜಿಲ್ಲೆಗೆ ಪೆರಲ (ಸೀಬೆ) ಬೆಳೆ ಹೇಳಿ ಮಾಡಿಸಿದಂತು ಸತ್ಯ..!

 –  ಶರಣಪ್ಪ ಕುಂಬಾರ