ಕೊಪ್ಪಳ : ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇನ್ನೂ ಪೊಲೀಸರಂತೆ ಖಾಕಿ ಸಮವಸ್ತದಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲ , ಅಧಿಕಾರಿಗಳ ದರ್ಜೆಗೆ ತಕ್ಕಂತೆ ಪೊಲೀಸ್ ಅಧಿಕಾರಿಗಳಂತೆ ಹೆಗಲ ಮೇಲೆ ಸ್ಟಾರ್ ಗಳ (ಬಿಲ್ಲೆ) ಮೂಲಕ ಸ್ಥಾನ ಮಾನ ಕೂಡಾ ಹೊಂದಲಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಅರಣ್ಯ, ಪೊಲೀಸ್, ಸಾರಿಗೆ ಅಧಿಕಾರಿಗಳಂತೆ ಗಣಿ ಅಧಿಕಾರಿಗಳಿಗೆ ಸಮವಸ್ತ್ರದ ಜೊತೆಗೆ ದರ್ಜೆಗೆ ತಕ್ಕಂತೆ (ಬಿಲ್ಲೆ) ಸ್ಟಾರ್ ಗಳನ್ನು ನೀಡಿದರೆ, ಇಲಾಖೆಯಲ್ಲಿ ಹೊಸ ಶಿಸ್ತು ಕಂಡುಬರುತ್ತದೆ. ಸಚಿವರ ಅಭಿಪ್ರಾಯದಂತೆ ಸಮವಸ್ತ್ರ ಪದ್ಧತಿ ಗಣಿ ಇಲಾಖೆಯಲ್ಲಿ ಜಾರಿಗೆ ಬಂದಿದ್ದಾದರೆ, ಇಲಾಖೆಯಲ್ಲಿ ಶಿಸ್ತಿನ ಜೊತೆ ಜೊತೆಗೆ ನಾಡಿನ ಅಪಾರ ಮೌಲ್ಯದ ಖನಿಜ ಸಂಪತ್ತು ರಕ್ಷಣೆ ಆಗುವುದರಲ್ಲಿ ಸಂಶಯವಿಲ್ಲ..!!