– ಯುನೆಸ್ಕೋ ವಿಶ್ವ ಪರಂಪರೆ ಸೇರ್ಪಡೆಯ ತಾತ್ಕಾಲಿಕ ಪಟ್ಟಿಯಲ್ಲಿ ಹಿರೇಬೆಣಕಲ್..!

– ಶರಣಪ್ಪ ಕುಂಬಾರ

ಕೊಪ್ಪಳ : ಕೊರೋನಾ ವೈರಸ್ ಕರಾಳ ಮಧ್ಯದಲ್ಲಿಯೂ ಇಡೀ ಕರ್ನಾಟಕ ರಾಜ್ಯ ಸಂಭ್ರಮ ಪಡುವ ಸುದ್ದಿವೊಂದು ಹೊರ ಬಿದ್ದಿದೆ..!
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮ ಬಳಿಯ ಗುಡ್ಡದ ಮೇಲ್ಭಾದಲ್ಲಿರುವ 400 ಕ್ಕೂ ಅಧಿಕ ಮಾನವರ ಕಲ್ಲಿನ ಮನೆಗಳ ರೂಪದ ಸಮಾಧಿ ಪ್ರದೇಶವನ್ನು (ಮೊರೆಯರ್ ಬೆಟ್ಟ) ಯುನೆಸ್ಕೋ ವಿಶ್ವ ಪರಂಪರೆಯ ಸೇರ್ಪಡೆಯ ತಾತ್ಕಾಲಿಕ ಪಟ್ಟಿಯಲ್ಲಿರುವುದು ಹೆಮ್ಮೆಯ ಸಂಗತಿ. ಇಲ್ಲಿಯವರೆಗೂ ಹಾಳು ಗುಡ್ಡದ ಪ್ರದೇಶವಾಗಿರುವ ಮೊರೆಯರ್ ಬೆಟ್ಟವು ಪ್ರವಾಸಿಗರ ತಾಣವಾಗಿ ಇನ್ನೂ ಮುಂದೆ ಅಭಿವೃದ್ಧಿಯಾಗಲಿದೆ. ಇಡೀ ವಿಶ್ವದ ಪ್ರವಾಸಿಗರ ಕಣ್ಣು ನಮ್ಮ ಹಿರೇಬೆಣಕಲ್ (ಮೊರೆಯರ್ ಬೆಟ್ಟ) ಐತಿಹಾಸಿಕ ಪ್ರದೇಶಗಳ ಮೇಲೆ ಬೀಳಲಿದೆ..!?
ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಇತಿಹಾಸ ಪ್ರಸಿದ್ಧ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಪ್ರದೇಶ ಸೇರಿದಂತೆ ದೇಶದ ಪ್ರಮುಖ ಆರು (6) ಐತಿಹಾಸಿಕ ಸ್ಥಳಗಳನ್ನು ‘ಯುನೆಸ್ಕೋ’ ವಿಶ್ವ ಪರಂಪರೆಯ ತಾಣಗಳಿಗೆ ಸೇರ್ಪಡೆಗೆ ಕೇಂದ್ರವು ಸಿದ್ಧಪಡಿಸಿದ ಪಟ್ಟಿಯನ್ನು ಬಹಿರಂಗಪಡಿಸಿದ್ದರು.
ದೇಶದ ಪ್ರಮುಖ ಐತಿಹಾಸಿಕ ಆರು ಸ್ಥಳಗಳು ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆಯ ಹಂತದಲ್ಲಿವೆ ಎಂಬ ಸುದ್ದಿ ಪ್ರಮುಖ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವುದು ವಿಶೇಷ.