– ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ತಾವರಗೇರಾ ಯುವಕರು..!

Hungry Dogs

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಹಸಿದುಕೊಂಡಿರುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಇಲ್ಲಿನ ಯುವಕರು ಮಾನವೀಯತೆ ಮೆರೆದಿದ್ದಾರೆ..!
ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ಬೀದಿ ನಾಯಿಗಳು ಆಹಾರವಿಲ್ಲದೆ, ಅಲೆದಾಡುತ್ತಿರುವ ಈ ಸಂದರ್ಭದಲ್ಲಿ ಎಚ್ಚತ್ತುಕೊಂಡ ಯುವಕರ ಗುಂಪು ತಮ್ಮ ಕೈಯಲ್ಲಾದ ಮಟ್ಟಿಗೆ ಆಹಾರ ತಯಾರಿಸುವ ಮೂಲಕ ಬೀದಿ ನಾಯಿಗಳು ಇರುವ ಜಾಗಕ್ಕೆ ತೆರಳಿ ಅನ್ನ ನೀಡುವ ಈ ಮಹತ್ತರ ಕಾರ್ಯಕ್ಕೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಒಂದನೇ ಅಲೆಯಲ್ಲಿಯೂ ಬೀದಿ ನಾಯಿಗಳ ಹಸಿವು ನೀಗಿಸದ್ದಾಗಿ ಹೆಸರಾಂತ ಫೋಟೋಗ್ರಾಫರ್ ಪ್ರಶಾಂತ ಕಲಾಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಶ್ಯಾಮ್ ಬಂಗಿ, ಅಮರೇಶ ಹೇಂಬ, ಅನೀಫ್ ಕುಷ್ಟಗಿ, ರೀಜ್ವಾನ್, ಭುವನೇಶ ಕೆ, ಪ್ರವೀಣ ಓದಾ ಸೇರಿದಂತೆ ಸಾರ್ವಜನಿಕರ ಸಹಕಾರ ಬಹಳಷ್ಟಿದೆ..!!

 

One thought on “– ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ತಾವರಗೇರಾ ಯುವಕರು..!

Comments are closed.