– ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕಾಕಿ ಖದರ್ ನಲ್ಲಿ ನೋಡುವ ಕಾಲ ಸನ್ನಿಹಿತ..!?

– ಶರಣಪ್ಪ ಕುಂಬಾರ.

ಕೊಪ್ಪಳ : ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕಾಕಿ ಖದರ್ ನಲ್ಲಿ ನೋಡುವ ಕಾಲ ಸನ್ನಿಹಿತವಾಗಿದೆ. ಇಲಾಖೆ ಹಿರಿಯ ಅಧಿಕಾರಿಗಳ ಶಿಫಾರಸು ಹಂತ ಪೂರ್ಣ ಗೊಂಡ ಸಮವಸ್ತ್ರದ ಖಡತ, ಸರಕಾರದ ಒಪ್ಪಿಗೆ ಪಡೆಯುವ ಹಂತದಲ್ಲಿದೆ..!?


ಇಲಾಖೆ ಸಚಿವ ಮುರಗೇಶ ನಿರಾಣಿ ಅವರು ಇತ್ತೀಚೆಗೆ ಅಷ್ಟೇ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸಮವಸ್ತ್ರ ಜಾರಿಗೆ ತರುವ ಕುರಿತು ವಿಷಯ ಬಹಿರಂಗ ಪಡಿಸಿದ್ದರು. ಇಲಾಖೆಯ GEOLOGISTS ನಿಂದ ಹಿಡಿದು, ADDITIONAL DIRECTOR ರವರೆಗೆ ಹುದ್ದೆಗಳಿಗೆ ತಕ್ಕಂತೆ ಸಮವಸ್ತ , ಬಿಲ್ಲೆ , ಕ್ಯಾಪ್, ಬ್ಯಾಡ್ಜ್ ಇತ್ಯಾದಿಗಳನ್ನು ಇಲಾಖೆಯ ಸೆಕ್ಷನ್ 23 (C) MM (D&R) Act 1957 ರ ಪ್ರಕಾರ ಸಮವಸ್ತ್ರ ನೀತಿ- 2021 ರ ಪ್ರಕಾರ ತಯಾರಿಸಲಾಗಿದೆ.

ಎಲ್ಲಾ ಅಂದು ಕೊಂಡಂತೆ ಆದರೆ, ಇನ್ನೇನು ಕೆಲವು ದಿನಗಳಲ್ಲಿ  ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕಾಕಿ ಸಮವಸ್ತ್ರದಲ್ಲಿ ನೋಡಬಹುದಾಗಿದೆ. ಅಕ್ರಮ ಗಣಿಗಾರಿಕೆ ಸ್ಥಳಗಳ ಮೇಲೆ ದಾಳಿ ಕೈಗೊಳ್ಳುವ  ಕಾಲಕ್ಕೆ ಪೊಲೀಸ್ ಇಲಾಖೆ ನೆರವು ಪಡೆಯುತ್ತಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇನ್ನೂ ತಾವೇ ಖಡಕ್ ಸಮವಸ್ತ್ರದಲ್ಲಿ ನಾಡಿನ ಖನಿಜ ಸಂಪತ್ತು ರಕ್ಷಿಸುವುದಕ್ಕೆ ಮುಂದಾಗುವ ದಿನಗಳು ಅತಿ ಶೀಘ್ರದಲ್ಲಿಯೇ ಕೂಡಿಬರಲಿವೆ..!!