– ಸ್ವಾತಂತ್ರ್ಯ ಸಂಗ್ರಾಮದ ಮಹಾ ದೊರೆ ಇನ್ನಿಲ್ಲ..!

ಬೆಂಗಳೂರು : ಹಿರಿಯ ಸ್ವಾತಂತ್ರ್ಯ ಸೇನಾನಿ ಹಾಗೂ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘದ ಮಾಜಿ ಅಧ್ಯಕ್ಷ ಹೆಚ್.ಎಸ್.ದೊರೆಸ್ವಾಮಿ ಎಂಬ ಮಹಾ ಜ್ಯೋತಿ ನಂದಿಹೋಗಿದೆ..!

 

 

 

ರಾಜ್ಯದಲ್ಲಿಯೇ ಬದುಕುಳಿದ ಹಿರಿಯ ಸ್ವಾತಂತ್ರ್ಯ ಸೇನಾನಿಗಳಲ್ಲಿ ಒಬ್ಬರಾಗಿದ್ದ ಹೆಚ್.ಎಸ್.ದೊರೆಸ್ವಾಮಿ (103) ಇಂದು ಮಧ್ಯಾಹ್ನ 1.30 ಕ್ಕೆ ಜಯದೇವ ಹೃದ್ರೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೊರೋನಾ ವೈರಸ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೇ ಮೊದಲ ವಾರ ಚಿಕಿತ್ಸೆಗೊಳಪಟ್ಟಿದ್ದ ದೊರೆಸ್ವಾಮಿ ಅವರು ಗುಣಮುಖವಾಗಿದ್ದರು. ಪುನಃ ಮಹಾಮಾರಿ ಕೊರೋನಾ ಬಲಿ ಪಡೆದಿದೆ. ಹುಟ್ಟು ಹೋರಾಟಗಾರನನ್ನು ಕಳೆದುಕೊಂಡ ನಾಡು ಬಡವಾಗಿದೆ..!!

– ಶರಣಪ್ಪ ಕುಂಬಾರ.