– ಶರಣಪ್ಪ ಕುಂಬಾರ.
ಕೊಪ್ಪಳ : ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಗಳು ಜೊರಾಗಿ ನಡೆದಿವೆ. ರೋಹಿಣಿ ಮಳೆಯ ಉತ್ತಮ ತತಿಯಲ್ಲಿ ಭೂವಿಗೆ ಹೊನ್ನ (ಬೀಜ) ಬಿತ್ತುವ ತವಕದಲ್ಲಿರುವ ಕೃಷಿಕರ ಖುಷಿಗೆ ಪಾರವೇ ಇಲ್ಲದಂತಾಗಿದೆ..!
ವಿಶೇಷವಾಗಿ ಮಳೆಯನ್ನೇ ನಂಬಿದ ಒಣ ಬೇಸಾಯದ ರೈತರು, ತಮ್ಮ ಜಮೀನುಗಳಿಗೆ ಬೀಜಗಾಣಿಸಬೇಕು ಎಂಬ ಕನಸನ್ನುತುಂಬು ಹಸಿಯಾಗಿರುವ ಭೂಮಿಯಲ್ಲಿ (ಉತ್ತಮ ಹದ) ನನಸಾಗಿಸಿಕೊಳ್ಳುತ್ತಿದ್ದಾರೆ. ವರ್ಷವಿಡಿ ಕಾಯ್ದುಕುಳಿತಿದ್ದವರಿಗೆ ಮುಂಗಾರಿನ ಆರಂಭದ ಅಶ್ವಿನಿ, ಭರಣಿ ಹಾಗೂ ಕೃತಿಕಾ ಮಳೆಗಳ ಹನಿಗಳು ಧರೆಗೂರುಳಿದರೆ ಸಾಕು, ಭೂಮಿ ಹದಗೊಳಿಸುವ ಕಾರ್ಯದಿಂದ ಹಿಡಿದು, ಕೊಟ್ಟಿಗೆ ಗೊಬ್ಬರ ಸಿಂಪಡಣೆ ಸೇರಿದಂತೆ ಇತ್ಯಾದಿ ಕೃಷಿ ಚಟುವಟಿಕೆಗಳು ನಡೆದುಬಿಟ್ಟಿರುತ್ತವೆ. ರೈತರು ಅಂದು ಕೊಂಡಂತೆ ಈ ವರ್ಷ ಎಲ್ಲ ಕಾರ್ಯಗಳು ಸಮರೋಪ ಹಾದಿಯಲ್ಲಿ ಜರುಗಿದ್ದಾಗಿವೆ. ʼಹೆಸರುʼ ಬಿತ್ತನೆಗೆ ಮುಂದಾದ ಬಹುತೇಕ ರೈತರು ಹೆಸರು ಬೆಳೆಯ ಭರಪೂರ ಫಸಲಿಗಾಗಿ ಎದುರು ನೋಡುತ್ತಿದ್ದಾರೆ. ಆ ಮಳೆರಾಯ ಸಮಯಕ್ಕೆ ಸರಿಯಾಗಿ ಸುರಿದಿದ್ದಾದರೆ, ಈ ಭಾಗದ ಕಪ್ಪು ಮತ್ತು ಕೆಂಪು ಮಣ್ಣಿನ ಮಕ್ಕಳ ಸಂಭ್ರಮ ಮತ್ತಷ್ಟು ಇಮ್ಮಡಿಯಾಗುವುದರಲ್ಲಿ ಸಂಶಯವಿಲ್ಲ..!!
ಚಿತ್ರ : ಗಿರಿಧರ ಕೆ. ಪೂಜಾರ.