– ಕಿಷ್ಕಿಂದಾ ಆಂಜನೇಯ ದೇವಸ್ಥಾನದ ಹುಂಡಿಯಲ್ಲಿ 6,37,458 ರೂಪಾಯಿಗಳ ಸಂಗ್ರಹ..!

– ಶರಣಪ್ಪ ಕುಂಬಾರ.

ಕೊಪ್ಪಳ : ಹನುಮಂತನ ಜನ್ಮ ಸ್ಥಳವಾದ ಕಿಷ್ಕಿಂದಾ ಪರ್ವತ ಪ್ರದೇಶದ ಆಂಜನೇಯ ದೇವಸ್ಥಾನದ ಹುಂಡಿಯಲ್ಲಿ 6,37,458 ರೂಪಾಯಿಗಳು ಸಂಗ್ರಹವಾಗಿದೆ..!

ಗಂಗಾವತಿ ತಹಸೀಲ್ದಾರ ಯು.ನಾಗರಾಜ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ 31.05.2021 ರಂದು ಬೆಳಗ್ಗೆ ಜರುಗಿತು.
ಹುಂಡಿ ಸುರಕ್ಷತೆ ಸೇರಿದಂತೆ ಕೊರೋನಾ ನಿಯಮ ಮತ್ತು ಹಣ ಹಾಳಾಗುವ ದೃಷ್ಟಿಯಿಂದ ಹುಂಡಿ ಎಣಿಕೆಗೆ ಮುಂದಾಗಿತ್ತು. ಈ ಬಾರಿಯ ಹುಂಡಿ ಎಣಿಕೆಯಲ್ಲಿ ನೇಪಾಳ ದೇಶದ ಎರಡು ನಾಣ್ಯಗಳು ಸಂಗ್ರಹವಾಗಿರುವುದು ವಿಶೇಷ. ಕೊರೋನಾ ವೈರಸ್ ಹರಡುವ ಹಿನ್ನಲೆಯಲ್ಲಿ 21.04.2021 ರಿಂದ ನಿಷೇಧ ಹೇರಲಾಗಿತ್ತು. ಸೂಕ್ತ ಪೊಲೀಸ್ ಬಂದೊ ಬಸ್ತ ಮತ್ತು ಸಿಸಿ ಹಾಗೂ ವಿಡಿಯೋ ಕಣ್ಗಾವಲು ಎರ್ಪಡಿಸಲಾಗಿತ್ತು.
ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ,   ಅಂಜನಾದ್ರಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಅನಂತ ಜೋಶಿ, ಶಿರಸ್ತೇದಾರ್ ಮೈಬೂಬಲಿ, ಉಪ ತಹಸೀಲ್ದಾರ್ ಮಹೇಶ್ ದಲಾಲ, ಸಿಬ್ಬಂದಿ ಶರಣಪ್ಪ, ಅಭಿಷೇಕ್, ವಿರಯ್ಯ ಹಾಗೂ ಸಣಾಪೂರ ಪಿ ಕೆ ಜಿ ಬಿ ವ್ಯವಸ್ಥಾಪಕ ಶ್ರೀಕಲ್ಯಾಣ, ಸಿಬ್ಬಂದಿ ವೆಂಕಟೇಶ ದೇವಸ್ಥಾನದ ಸಿಬ್ಬಂದಿ ವರ್ಗ ಹಾಜರಿದ್ದರು ಎಂದು ತಹಸೀಲ್ದಾರ ತಿಳಿಸಿದ್ದಾರೆ..!!