– ಶರಣಪ್ಪ ಕುಂಬಾರ.

ಕೊಪ್ಪಳ : ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡಿದ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹಾಗೂ ಹನುಮನಾಳ ಗ್ರಾಮದ ಮಾರಾಟಗಾರರಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವಪ್ಪ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ..!
       ನಿಗದಿತ (ಎಂ.ಆರ್.ಪಿ) 266=00 ರೂಪಾಯಿಗಳ ದರಕ್ಕೆ ಒಂದು ಬ್ಯಾಗ್ ಯೂರಿಯಾ  ರಸ ಗೊಬ್ಬರವನ್ನು ಮಾರಾಟಮಾಡಬೇಕಾಗಿತ್ತು. ಅದರೆ, ಮಾರಾಟಗಾರರು 320=00 ರೂಪಾಯಿಗಳಿಗೆ ಹೆಚ್ಚಿನ ದರದಲ್ಲಿ ಮಾರಾಟಮಾಡಿರುವುದನ್ನು ರೈತರ ದೂರಿನ ಮೇರೆಗೆ ಸಹಾಯಕ ನಿರ್ದೇಶಕ ಮಹದೇವಪ್ಪ ಹಾಗೂ ಕೃಷಿ ಅಧಿಕಾರಿ ಖಾದರಬೀ ನೇತೃತ್ವದ ತಂಡ ದಾಳಿ ಮಾಡಿ, ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಯೂರಿಯಾ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಖಾತರಿ ಪಡಿಸಿಕೊಂಡ ಮೇಲೆ ತಾವರಗೇರಾ ಪಟ್ಟಣದ ಶ್ರೀ ಸಿದ್ಧೇಶ್ವರ ಏಜೆನ್ಸಿ ಹಾಗೂ ಹನುಮನಾಳದ ವಸ್ತ್ರದ ಏಜೆನ್ಸಿ ಗೆ ನೋಟಿಸ್ ನೀಡಲಾಗಿದೆ ಎಂದು ‘ಕೃಷಿ ಪ್ರಿಯ’ ಗೆ ಎಡಿಎ ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ದರಗಳಿಗೆ ಕ್ರಿಮಿನಾಶಕ ಹಾಗೂ ಗೊಬ್ಬರಗಳನ್ನು ಮಾರಾಟ ಮಾಡಿದವರ ಮೇಲೆ ಅಧಿಕಾರಿಗಳು ಕೇವಲ ನೋಟಿಸ್ ನೀಡಿದರೆ ಸಾಲದು, ಸೂಕ್ತ ಕ್ರಮ ಜರುಗಿಸಬೇಕೆಂಬುದು ರೈತರ ಆಗ್ರಹವಾಗಿದೆ..!?