– ವಾಡಿಕೆ ಸುಳ್ಳಾಗಿಸಿದ ಆರಿದ್ರಾ ಮಳೆ..!

 

 

– ಶರಣಪ್ಪ ಕುಂಬಾರ.

ಕೊಪ್ಪಳ : ಆರಿದ್ರಾ ಮಳೆ ಆದ್ರ ಕರೆ.. ಮನೆಯ ಹೀರೇ ಸೊಸೆ ನಡೆದರೆ ಕರೆ.. ಎಂಬ ರೈತರ ವಾಡಿಕೆಯನ್ನ ಆರಿದ್ರಾ ಮಳೆ ಈ ವರ್ಷ ಧರೆಗೆ ಸುರಿಯುವ ಮೂಲಕ ಸುಳ್ಳಾಗಿಸಿತು..!
ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಾಯಂಕಾಲ ಆರಂಭವಾದ ಮಳೆ ಕೆಲ ಭಾಗದಲ್ಲಿ ಅತಿಯಾಗಿ ಸುರಿದಿರುವುದು ವರದಿಯಾಗಿದೆ. ರಾತ್ರಿಯಿಡಿ ಸುರಿದ ಮಳೆಯು ಹಸಿ (ಭೂಮಿ ತಂಪು) ಮಳೆ ಎಂಬ ಹೆಸರಿಗೆ ಪಾತ್ರವಾಗಿತು. ಇದೀಗ ತಾನೇ ನೆಲದಿಂದ ಮೇಲಕ್ಕೆ ಬಂದಿರುವ ಹೆಸರು, ಗೋವಿನಜೋಳ, ಸೂರ್ಯಕಾಂತಿ ಇತ್ಯಾದಿ ಪೈರುಗಳಿಗೆ ಜೀವದಾನವಾದ ಈ ಮಳೆಯನ್ನು ರೈತ ಸಮೂಹ ಕೊಂಡಾಡಿದರು. ಕೇವಲ ಅಡ್ಡಾದಿಡ್ಡಿ ಗಾಳಿಯಲ್ಲೇ ಕಾಲ ಕಳೆದು ಹೋಗುವ ಆರಿದ್ರಾ ಮಳೆ ಸುರಿದಿರುವುದು ಮಾತ್ರ ಅನ್ನದಾತರ ಖುಷಿಗೆ ಪಾರವೇ ಇಲ್ಲದಂತಾಗಿದೆ..!!