– ಸಣ್ಣ ಪತ್ರಿಕೆಗಳಿಗೆ ಪ್ರೋತ್ಸಾಹದ ಅಗತ್ಯವಿದೆ : ಅಮರೇಗೌಡ ಪಾಟೀಲ್ ಬಯ್ಯಾಪೂರು..!

– ಶರಣಪ್ಪ ಕುಂಬಾರ.

ಕೊಪ್ಪಳ : ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ಸಣ್ಣ ಪತ್ರಿಕೆಗಳ ಉಜ್ವಲ ಭವಿಷ್ಯಕ್ಕೆ ಪ್ರೋತ್ಸಾಹದ ಅವಶ್ಯವಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅಭಿಪ್ರಾಯವ್ಯಕ್ತಪಡಿಸಿದರು..!

 

 

ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ವಕ್ಕನದುರ್ಗಾ ಗ್ರಾಮದಲ್ಲಿ ‘ಜನಾದೇಶ ವಾಣಿ’ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ರಾಜ್ಯ ಮಟ್ಟದ ಪತ್ರಿಕೆಗಳ ಬೆಲೆ ಸಮರದಲ್ಲಿ ಸಣ್ಣ ಪತ್ರಿಕೆ ನಡೆಸುವುದು ಕಷ್ಟಕರ ಸಂಗತಿಯಾಗಿದೆ. ಸರಕಾರ ಸಣ್ಣ ಪತ್ರಿಕೆಗಳಿಗೆ ವಿಶೇಷ ಯೋಜನೆ ರೂಪಿಸಿ, ಬೆಂಬಲಿಸಬೇಕಾಗಿದೆ ಎಂದರು. ನೂತನವಾಗಿ ಬಿಡುಗಡೆಯಾದ ಜನಾದೇಶ ವಾಣಿ ಪತ್ರಿಕೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು. ಗ್ರಾಮಸ್ಥರಾದ ಭೀಮರಾವ್ ಕುಲಕರ್ಣಿ, ಮಲ್ಲಿಕಾರ್ಜುನಗೌಡ ಪಾಟೀಲ್, ಮಹಾಂತೇಶ ಶೆಟ್ಟರ್, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಭಂಡಾರಿ ಮಾತನಾಡಿದರು. ಮುಖಂಡರಾದ ಯಮನಪ್ಪ ಗಾಜಿ, ಯಮನೂರಪ್ಪ ಭಂಡಾರಿ, ಯಮನೂರಪ್ಪ ಬಳೂಟಗಿ, ರಂಗಪ್ಪ ಮಿಟ್ಟಲಕೋಡ, ದ್ಯಾವನಗೌಡ ಮಾಲಿಪಾಟೀಲ, ಹನುಮಪ್ಪ ರಗಣಿ, ಜನಾದೇಶ ವಾಣಿ ಪತ್ರಿಕೆ ಸಂಪಾದಕ ಮಲ್ಲು ಪರುತಿ, ಲಕ್ಷ್ಮಣ ಪರುತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಭಂಡಾರಿ ಅಧ್ಯಕ್ಷತೆವಹಿಸಿದ್ದರು.

ಸಸಿ ನೆಟ್ಟ ಶಾಸಕರು : ಜನದೇಶ ವಾಣಿ ಪತ್ರಿಕೆ ಬಿಡುಗಡೆ ಹಿನ್ನೆಲೆಯಲ್ಲಿ ವಕ್ಕನದುರ್ಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ಸಸಿ ನೆಡುವ ಮೂಲಕ ಪರಿಸರ ಕಾಳಜಿ ಮೆರೆದರು. ಪತ್ರಿಕೆ ಬಿಡುಗಡೆ ಸವಿ ನೆನಪಿಗಾಗಿ ಸಂಪಾದಕ ಮಲ್ಲು ಪರುತಿ ಶಾಲೆಗೆ ಸಸಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳು ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.