– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಜಮೀನೊಂದರಲ್ಲಿ ಚಿರತೆ ದಾಳಿಗೆ ಹೋರಿವೊಂದು ಬಲಿಯಾಗಿದೆ..!
ಗುಡ್ಡದ ದೇವಲಾಪೂರ ಗುಡ್ಡದ ಸಮೀಪದ ಭೀಮಪ್ಪ ಅಜ್ಜಪ್ಪ ಸಾಂತಗೇರಿ ಎಂಬುವರಿಗೆ ಸೇರಿದ ಜಮೀನಿನಲ್ಲಿರುವ ಮನೆ ಬಳಿ ಕಟ್ಟಿ ಹಾಕಿದ್ದ ಹೋರಿ ಚಿರತೆ ದಾಳಿಗೆ ಬಲಿಯಾಗಿರುವುದು. ಹೋರಿಯ ಗಂಟಲು ಭಾಗಗಕ್ಕೆ ಕಚ್ಚಿದ ಚಿರತೆ ರಕ್ತ ಹಿರಿದೆ. ಕಟ್ಟಿ ಹಾಕಿದ ಜಾನುವಾರುಗಳ ಮೇಲೆ ಚಿರತೆಗಳ ತಂಡವು ದಾಳಿಗೆ ಮುಂದಾಗಿರಬಹುದು ಎಂದು ರೈತ ಭೀಮಪ್ಪ ಸಾಂತಗೇರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಗುಡ್ಡದ ದೇವಲಾಪೂರ ಗ್ರಾಮ ಸೇರಿದಂತೆ ಹನುಮನಾಳದವರ ಸುಮಾರು 10 ಕ್ಕೂ ಅಧಿಕ ಕುಟುಂಬಗಳು ಈ ಭಾಗದ ಜಮೀನಿನಲ್ಲಿ ವಾಸವಾಗಿರುವ ನಮಗೆ ಚಿರತೆ ಸೇರಿದಂತೆ ತೋಳಗಳ ಹಾವಳಿಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಜಾನುವಾರುಗಳ ಸೇರಿದಂತೆ ಜೀವ ರಕ್ಷಣೆ ಇನ್ನುಮುಂದೆ ಹೇಗೆ..!? ಎಂಬುದು ಈ ಭಾಗದ ರೈತರ ಪ್ರಶ್ನೆಯಾಗಿದೆ.
ಚಿರತೆ ದಾಳಿ ಮಾಡಿದ ಸ್ಥಳಕ್ಕೆ ಭೇಟಿ ಮಾಡಿದ ಮುಖಂಡ ಶರಣಪ್ಪ ಕುಂಬಾರ (ನೀಡಶೇಸಿ) ಅವರು ಹಾನಿಗೊಳಗಾದ ರೈತನಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಚಿರತೆ ಪ್ರತ್ಯಕ್ಷ : ಇತ್ತೀಚಿಗೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಗಡಚಿಂತಿ ಗ್ರಾಮದ ಗುಡ್ಡದ ಬಳಿ ಚಿರತೆವೊಂದು ಪ್ರತ್ಯಕ್ಷವಾಗಿದೆ. ಗುಡ್ಡದಲ್ಲಿ ಚಿರತೆವೊಂದು ಸಂಚರಿಸುವುದು ಕುರಿಗಾರರ ಕಣ್ಣಿಗೆ ಬಿದ್ದಿದೆ. ಈ ಭಾಗದ ಕಾಯ್ದಿಟ್ಡ ಅರಣ್ಯ ಪ್ರದೇಶದಲ್ಲಿನ ವನ್ಯ ಜೀವಿಗಳ ದಾಳಿ ಭಯದಲ್ಲಿ ಈ ಭಾಗದ ರೈತರು ಜೀವನ ಸಾಗಿಸುತ್ತಿದ್ದಾರೆ..!!