ಮಹಾಂತೇಶ ಚಕ್ರಸಾಲಿ
ಕೃಷಿಪ್ರಿಯ ನ್ಯೂಸ್ |
ಕೋಪ್ಪಳ: ಪ್ರಾಥಮಿಕ ಹಂತದ ಶಿಕ್ಷಣ ವಿದ್ಯಾರ್ಥಿಯ ಮುಂದಿನ ಕಲಿಕೆಗೆ ಭದ್ರ ಬುನಾದಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು ಹೇಳಿದರು.
ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.17 ಶನಿವಾರದಂದು ಆಯೋಜಿಸಿದ್ದ ವಲಯ ಮಟ್ಟದ 1-5ನೇ ತರಗತಿ ಬೋಧಿಸುವ ಶಿಕ್ಷಕರ ಎಫ್ ಎಲ್ ಎನ್ ಕಲಿಕಾ ಮೇಳದಲ್ಲಿ ಶಿಕ್ಷಕರ ಕಲಿಕಾ ಸಾಮಗ್ರಿಗಳ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು.
ಶಿಕ್ಷಕರು ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕುರಿತಾಗಿ ಹೆಚ್ಚು ಪರಿಶ್ರಮವಹಿಸಿ ತಯಾರಿಸಿದ ಕಲಿಕಾ ಸಾಮಗ್ರಿಗಳನ್ನು ನೋಡಿದರೆ ಪ್ರಾಥಮಿಕ ಹಂತದಲ್ಲಿ ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ವಿದ್ಯಾರ್ಥಿಗಳು ಸಹ ಮುಂದಿನ ಹಂತದ ಶೈಕ್ಷಣಿಕ ಬೆಳವಣಿಗೆ ಹೊಂದಬಲ್ಲವು ಎಂದು ಪ್ರಶೌಂಸೆ ವ್ಯಕ್ತಪಡಿಸಿದ ಅವರು., ಎಲ್ಲ ಶಿಕ್ಷಕರು ಪೂರ್ವ ಸಿದ್ಧತೆಯೊಂದಿಗೆ ಪಾಠ ಬೋಧನಾ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.
10 ಭಾಷೆ ಮತ್ತು ಗಣಿತ ವಿಷಯದ ಕಲಿಕಾ ಸಾಮಗ್ರಿಗಳ ಮಳಿಗೆಗಳನ್ನು ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ಎಂ, ಉದ್ಘಾಟಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಲ್ಲಪ್ಪ ಕುದರಿ, ಪ್ರಧಾನ ಕಾರ್ಯದರ್ಶಿ ಹೈದರಾಲಿ ಜಾಲಿಹಾಳ, ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಅಹ್ಮದ್ ಹುಸೇನ್ ಆದೋನಿ, ನಿರ್ದೇಶಕರಾದ ಯಮನಪ್ಪ ಲಮಾಣಿ, ಶಿಕ್ಷಣ ಸಂಯೋಜಕ ಶಿವಾನಂದ ಪಂಪಣ್ಣವರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ಬೆಟಗೇರಿ, ಸಮೂಹ ಸಂಪನ್ಮೂಲ ವ್ಯಕ್ತಿ ಶರಣಗೌಡ ಗೌಡರ, ವಿಟ್ಟಲ್ ಪತ್ತಾರ್, ವಸಂತ ರಾಜೂರು ಮತ್ತು ಹನುಮಂತ ಗೋಡೆಕಾರ್ ಹಾಗೂ ಮುಖ್ಯೋಪಾಧ್ಯಾಯ ಹನುಮಂತ್ ಮಾಲ್ಗಿತ್ತಿ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ತಾಲೂಕ ಸಂಯೋಜಕ ಹಾಲೇಶ್, ಜಯಶ್ರೀ ಪಾಟೀಲ್, ಕುಮಾರಿ ಸುಮಂಗಲ ಭಟ್, ಸ್ಥಳೀಯ ಗ್ರಾಮ ಪಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ಎಸ್‌ಡಿಎಂಸಿ ಉಪಾಧ್ಯಕ್ಷರು ಹಾಗೂ ವಲಯದ ಎಲ್ಲಾ ಮುಖ್ಯೋಪಾಧ್ಯಾಯರು ಸಂಪನ್ಮೂಲ ಶಿಕ್ಷಕರು ಇದ್ದರು.