ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: ತಾಲೂಕಿನ 4 ಹೋಬಳಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ದೂರವಾಣಿ ಕರೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರಿಗಾಗಿ ತಾಲೂಕಾ ಮಟ್ಟದ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈ ಕುರಿತು ಮಂಗಳವಾರ ಸಂಜೆ ತಹಸೀಲ್ದಾರ್ ರವಿ ಎಸ್. ಅಂಗಡಿ ಅವರು ಮಾಧ್ಯಮ ಮೂಲಕ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕು ಕಛೇರಿ ದೂರವಾಣಿ ಸಂಖ್ಯೆ- 9845791349, ಹನುಮಸಾಗರ ಉಪ ತಹಶೀಲ್ದಾರ ಕಛೇರಿ ದೂರವಾಣಿ ಸಂಖ್ಯೆ- 7022633116, ಹನುಮನಾಳ ಉಪ ತಹಶೀಲ್ದಾರ ಕಛೇರಿ ದೂರವಾಣಿ ಸಂಖ್ಯೆ- 7259995531, ತಾವರಗೇರಾ ಉಪ ತಹಶೀಲ್ದಾರ ಕಛೇರಿ ದೂರವಾಣಿ ಸಂಖ್ಯೆ- 9448982759ಗೆ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ದೂರವಾಣಿ ಕರೆ ಮೂಲಕ ಪರಿಹಾರ ಕಂಡುಕೊಳ್ಳಲು ಕೋರಿದ್ದಾರೆ.