ತಾ.ಪಂ. ವಿವಿಧ ನೂತನ ಕೊಠಡಿ ಶಾಸಕ ಡಿ.ಎಚ್. ಪಾಟೀಲರಿಂದ ಉದ್ಘಾಟನೆ

ಶರಣು ಲಿಂಗನಬಂಡಿ
ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ 2022-23ನೇ ಸಾಲಿನ ತಾಲೂಕ ಪಂಚಾಯತ, ಮುದ್ರಾಂಕ ಶುಲ್ಕ ಅನುದಾನದಡಿ ನಿರ್ಮಿಸಿದ ನೂತನ ಕೊಠಡಿಗಳನ್ನು ಶನಿವಾರ ಬೆಳಿಗ್ಗೆ  ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕರಾದ ದೂಡ್ಡನಗೌಡ ಹೆಚ್ ಪಾಟೀಲ್ ಅವರು ಉದ್ಘಾಟಿಸಿದರು.

ಮುದ್ರಾಂಕ ಶುಲ್ಕದಡಿ ಅಂದಾಜು ₹ 9 ಲಕ್ಷಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿ ಕೊಠಡಿ, ಅನಿರ್ಬಂಧಿತ ಅನುದಾನ ಅಂದಾಜು ಮೊತ್ತ ₹10 ಲಕ್ಷ ಗಳಲ್ಲಿ ವಿ.ಆರ್.ಡಬ್ಲ್ಯೂ ಮತ್ತು ಎಮ್.ಆರ್.ಡಬ್ಲ್ಯೂ ಸಮಾಲೋಚನಾ ಕೇಂದ್ರ ಕೊಠಡಿ, ನರೇಗಾ ವಿಭಾಗ, ಸಂಜೀವಿನಿ ವಿಭಾಗ ಸಹಾಯಕ ನಿರ್ದೇಶಕರ (ಪಂ.ರಾ) ವಿಭಾಗ ಹಾಗೂ ಎಂ.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂ ಸಮಾಲೋಚನ ಕೇಂದ್ರಗಳ ಕೊಠಡಿ, ತಾ.ಪಂ. ಸಾದಿಲ್ವಾರ ಅನುದಾನದಲ್ಲಿ ಅಂದಾಜು ₹8.30 ಲಕ್ಷಗಳಲ್ಲಿ ಗೋದಾಮು ನವಿಕರಣ ನರೇಗಾ ವಿಭಾಗ, ಅಂದಾಜು ₹9 ಲಕ್ಷ ನಿರ್ಮಾಣಗೊಂಡ ಎನ್.ಆರ್.ಎಲ್.ಎಂ. ವಿಭಾಗ ಕೊಠಡಿಗಳ ಕಾರ್ಯಾರಂಭಕ್ಕೆ ಇಂದು ಚಾಲನೆ ದೊರೆಯಿತು. ಇದೇವೇಳೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕರಾದ ದೂಡ್ಡನಗೌಡ ಹೆಚ್ ಪಾಟೀಲ್ ಅವರನ್ನು ತಾಲೂಕು ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ತಾಲೂಕಿನ ನಾಮ ನಿರ್ದೇಶಿತ ಸದಸ್ಯರುಗಳು, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಎಸ್. ಮಸಳಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ನಿಂಗನಗೌಡ ವಿ. ಹಿರೇಹಾಳ, ಸಂಜೀವಿನಿ ಯೋಜನೆ ಸಿಬ್ಬಂದಿ ಮಾದೇಗೌಡ ಪೋಲಿಸ್ ಪಾಟೀಲ್, ಸಂಗಮೇಶ ಸಂಗಪೂರ, ರಾಜು ಭಜಂತ್ರಿ, ತಾಲೂಕು ಪಂಚಾಯತ ಸಿಬ್ಬಂದಿ ಸಂಗಮೇಶ ನಂದಾಪೂರ, MGNREGA ಸಿಬ್ಬಂದಿ ಹಾಗೂ ಸಂಜೀವಿನಿ-NRLM ಯೋಜನೆಯ ಒಕ್ಕೂಟದ ಸಿಬ್ಬಂದಿಗಳಾದ MBK, LCRP ಸೇರಿದಂತೆ ಇತರರು ಉಪಸ್ಥಿತರಿದ್ದರು.