ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಮಳೆ ಕೈಕೊಟ್ಟ ಹಿನ್ನೆಲೆ ಭೀಕರ ಬರಗಾಲ ಅನುಭವಿಸುತ್ತಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಬೆಲೆ ಬಾಳುವ ಮೇವನ್ನು ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಇತರೆ ರೈತರಿಗೆ ನೀಡುವ ಮೂಲಕ ಔದಾರ್ಯಕ್ಕೆ ಸಾಕ್ಷಿಯಾದರು.!
ಕುಷ್ಟಗಿ ಪಟ್ಟಣದ ನಿವಾಸಿ ಯಲ್ಲಪ್ಪ ಸಂಗಟಿ ಎಂಬುವರು ಯಾವುದೇ ಫಲ ಅಪೇಕ್ಷೆ ಇಲ್ಲದೇ ಜಾನುವಾರುಗಳಿಗೆ ಮೇವು ನೀಡಿದ ರೈತ.
ತಾಲೂಕಿನಲ್ಲಿ ಮೇವಿನ ಅಭಾವ ಇರುವುದನ್ನು ಅರಿತ ರೈತ ಯಲ್ಲಪ್ಪ, ಜಾನುವಾರು ಹೊಂದಿರುವ ಬಡ ರೈತ
ದುರಗಪ್ಪ ಕನಕೊಪ್ಪ ಎನ್ನುವವರಿಗೆ ಒಂದು ಟ್ರ್ಯಾಕ್ಟರ್ ಭರ್ತಿ ಮೇವು ನೀಡಿ ರೈತ ಧರ್ಮ ಮೆರೆದಿದ್ದಾರೆ, ಜೊತೆಗೆ ರೈತರು ಮೆವನ್ನ ವ್ಯರ್ಥ ಮಾಡಬೇಡಿ, ಜಾನುವಾರು ಇರುವವರಿಗೆ ದಾನಮಾಡಿ ಅವುಗಳು ನಮ್ಮ ಜೊತೆ ಬದುಕಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ರೇತ ಯಲ್ಲಪ್ಪ ಸಂಗಟಿ ಕಾರ್ಯ ಮೆಚ್ಚಿ ದ್ವಾರಕಾಮಯಿ ಸೇವಾ ಟ್ರಸ್ಟ್’ನ ಕೃಷ್ಣ ಕಂದಕೂರು ಸೇರಿದಂತೆ ರಾಜಶೇಖರ ಸಂಗಟಿ, ದುರಗಪ್ಪ, ಕನಕಪ್ಪ ಹಾಗೂ ಸುತ್ತಮುತ್ತಲಿನ ಜಮೀನುಗಳ ರೈತರು ಗೌರವಿಸಿದ್ದಾರೆ.