ಹುಲಿಯಾಪೂರು ತಾಂಡಾದಲ್ಲಿ ಸಿಡಿಲಿಗೆ ಎತ್ತು ಬಲಿ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಲಿಯಾಪೂರು ತಾಂಡಾದಲ್ಲಿ ಏ.13 ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿಡಿಲು ಬಡಿದು ಎತ್ತು ಬಲಿಯಾದ ಘಟನೆ ಸಂಭವಿಸಿದೆ.

ತಾಂಡಾದ ರೈತ ಬುಡ್ಲೆಪ್ಪ ಕೃಷ್ಣಪ್ಪ ಲಮಾಣಿ ಎಂಬುವರಿಗೆ ಸೇರಿದ ಕೃಷಿಗೆ ಬಳಕೆಯ ಎತ್ತು ಇದಾಗಿದ್ದು, ಮನೆಯ ಮುಂದಿನ ಶೆಡ್ಡಿನಲ್ಲಿದ್ದ ಎತ್ತಿಗೆ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದೆ. ಸುಮಾರು ₹40 ಸಾವಿರ ಬೆಲೆ ಬಾಳುವ ಎತ್ತನ್ನು ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾನೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಗ್ರಾಮೀಣ ಲೆಕ್ಕಾಧಿಕಾರಿ ನಾಗರಾಜ ಭೇಟಿ ನೀಡಿ ವರದಿ ಪಡೆದಿದ್ದಾರೆ. ನೊಂದ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.