ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ: ಭಾರಿ ಬಿರುಗಾಳಿ ಮಳೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎಲೆ ಬಳ್ಳಿ ನೆಲಸಮವಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತುಗ್ಗವಡೋಣಿ ಸೀಮಾದ ಜಮೀನುಗಳಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತುಗ್ಗಲದೋಣಿ ಗ್ರಾಮದ ರೈತರಾದ ದ್ಯಾಮಣ್ಣ ಭೀಮಪ್ಪ ಭಾವಂಜಿ, ಹನುಮಪ್ಪ ಭೀಮಪ್ಪ ಭಾವಂಜಿ ಎಂಬುವರಿಗೆ ಸೇರಿದ ತಲಾ ಒಂದು ಎಕರೆ ಜಮೀನಿನಲ್ಲಿ ಬೆಳೆದು ನಿಂತ ಎಲೆ ಬಳ್ಳಿ, ಬಾಳೆ ಮಳೆ ಗಾಳಿಗೆ ತುತ್ತಾಗಿವೆ. ಲಕ್ಷಗಟ್ಟಲೆ ಖರ್ಚು ಮಾಡಿ ಬೆಳೆಯಲಾಗಿದ್ದ ಎಲೆ ಬಳ್ಳಿಗಳು ಇನ್ನೇನು ಕಟಾವು ಮಾಡುವ ಹಂತದಲ್ಲಿದ್ದ ಸಂದರ್ಭದಲ್ಲಿ ಬಹುತೇಕ ಬೆಳೆ ನೆಲ ಸಮವಾಗಿದ್ದು, ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ದಿನಗಳಲ್ಲಿ ಕಂಗಾಲಾಗಿರುವ ರೈತರು ಪರಿಹಾರಕ್ಕಾಗಿ ಕಂದಾಯ ಮತ್ತು ತೋಟಗಾರಿಕೆ ಇಲಾಖೆಗೆ ಅಂಗಲಾಚುತಿದ್ದಾರೆ.