ಕುಂಚ ಕಲಾವಿದ ಶೇಖ್ ಅಬ್ದುಲ್ ನವಾಜ ಇನ್ನಿಲ್ಲ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಪಟ್ಟಣದ ಮದೀನಾ ಗಲ್ಲಿಯ ಶಹಬುದ್ದಿನ್ ವಟಾರದ ನಿವಾಸಿ ಶೇಖ್ ಅಬ್ದುಲ್ ನವಾಜ (48) ಅನಾರೋಗ್ಯದ ಕಾರಣದಿಂದ ಮಗಳವಾರ ಬೆಳಗಿನ ಜಾವ 12.30ರ ಸುಮಾರಿಗೆ ನಿಧನರಾದರು.

ಮೃತರು, ಪತ್ನಿ ಸೇರಿದಂತೆ ಅಪಾರ ಬಂಧು-ಬಳಗ, ಸ್ನೇಹ ಬಳಗವನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಕುಂಚ ಕಲಾವಿದರಾಗಿದ್ದ ಅಬ್ದುಲ್ ನವಾಜ್ ಅವರು ತಾಲೂಕಿನಲ್ಲಿ ಎಸ್.ಎನ್. ಆರ್ಟ್ಸ್ ಎಂದೇ ಗುರುತಿಸಿಕೊಂಡಿದ್ದರು. ಪಟ್ಟಣದ ಹೊರವಲಯ ಹಳೇ ವಣಗೇರಾ ರಸ್ತೆ ಖಬರಸ್ಥಾನದಲ್ಲಿ ಮಂಗಳವಾರ ಸಂಜೆ 4.30ರ ಸುಮಾರಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.