ಕುಷ್ಟಗಿ RKDCC ಬ್ಯಾಂಕ್ ಲಾಭದಲ್ಲಿ – ಶೇಖರಗೌಡ ಹರ್ಷ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಕೇಂದ್ರೀಯ ಬಸ್ ನಿಲ್ದಾಣ ಮುಂಭಾಗ ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತಿದ್ದ ಕುಷ್ಟಗಿ ಶಾಖೆಯ RKDCC ಬ್ಯಾಂಕ್ ಕೊಪ್ಪಳ ರಸ್ತೆಯ ಮುರಡಿ ಭೀಮಜ್ಜ ವೃತ್ತದ ಬಳಿ ಬಾಡಿಗೆ ಕಟ್ಟಡದಲ್ಲಿ ಸ್ಥಳಾಂತರ ಮಾಡಲಾಗಿದೆ.

ಇಂದು ಶುಕ್ರವಾರ ದಿನ ಹೊಸ ರೂಪ ಪಡೆದ ಬ್ಯಾಂಕ್ ಅನ್ನು ಎಮ್. ಗುಡುದೂರು ಶ್ರೀಮಠದ ದೊಡ್ಡಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ RKDCC ಬ್ಯಾಂಕ್ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ಹಾಗೂ ಉಪಾಧ್ಯಕ್ಷ ಶಿವಶಂಕರಗೌಡ ಕಡೂರ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್, ಕುಷ್ಟಗಿ ಪಟ್ಟಣದಲ್ಲಿ ಅತ್ಯಂತ ವಿಶ್ವಾಸಗಳಿಸಿ ರೈತರ ಬ್ಯಾಂಕ್ ಎಂದು ಹೆಸರುವಾಸಿ ಆಗಿರುವ ರಾಯಚೂರು-ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜೀರೋ MPA ಹೊಂದಿದ್ದು ಅತ್ಯಂತ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಮ್ಮ ಬ್ಯಾಂಕ್ ಗ್ರಾಹಕರಿಗೆ RTGS, ಪೋನ್ ಪೇ, ಮೊಬೈಲ್ ಬ್ಯಾಂಕಿಂಗ್, ATM ಸೇವೆಗಳು ಲಭ್ಯವಿದ್ದು, ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಇನ್ಮುಂದೆ ಸಿಗಲಿದೆ.

ನಮ್ಮ ಬ್ಯಾಂಕ್ 17 ಸಾವಿರ ಸದಸ್ಯರನ್ನು ಒಳಗೊಂಡಿದೆ, ಈಗಾಗಲೇ ಸುಮಾರು ₹20 ಕೋಟಿ ಠೇವಣಿ ಹೊಂದಿದೆ. ಸುಮಾರು ₹40 ಕೋಟಿ ಟರ್ನಾವರ್ನವಿದ್ದು, ಬರಗಾಲವಿದ್ದರೂ ಸಹ ತಾಲೂಕಿನಲ್ಲಿ ರೈತರು ಸಾಲ ಮರುಪಾವತಿ ಮಾಡಿದ್ದಾರೆ. 100ಕ್ಕೆ ನೂರರಷ್ಟು ಸಾಲ ವಸೂಲಾತಿಯಲ್ಲಿ ಅಂಕ ಗಳಿಸಿರುವುದು ನಮ್ಮ ಬ್ಯಾಂಕಿನ ಹೆಮ್ಮೆಯ ವಿಷಯ. ಕರ್ತವ್ಯ ನಿರ್ವಹಿಸುವ ವ್ಯವಸ್ಥಾಪಕ, ಸಿಬ್ಬಂದಿ ಕಾರ್ಯವೈಖರಿ ಬ್ಯಾಂಕಿನ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಈ ಶಾಖೆಯಡಿ ಬರುವ ತಾಲೂಕಿನ ಮೂರು ಬ್ಯಾಂಕ್’ಗಳು ಸಹ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಡೀ ಕೊಪ್ಪಳ ಜಿಲ್ಲೆಯ ನಮ್ಮೆಲ್ಲ ಬ್ಯಾಂಕುಗಳು ಮುನ್ನಡೆ ಸಾಧಿಸಿವೆ. ಬ್ಯಾಂಕ್ ಬೆಳವಣಿಗೆಯಲ್ಲಿ ರಾಯಚೂರು ಜಿಲ್ಲೆ ಅಷ್ಟಕಷ್ಟೇಯಿದ್ದರೂ ರಾಜ್ಯದಲ್ಲಿ ನಮ್ಮ RKDCC ಬ್ಯಾಂಕ್ ಎರಡನೇ ಸ್ಥಾನ ಪಡೆದಿದೆ ಎಂದು ಶೇಖರಗೌಡ ಮಾಲಿಪಾಟೀಲ ಮಾಹಿತಿ ನೀಡಿದರು.

ಪ್ರತ್ಯೇಕ ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಗಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಹಿಂದಿನ ಶಾಸಕ ಹಾಲಪ್ಪ ಆಚಾರ ಸೇರಿದಂತೆ ಅನೇಕರು ಪ್ರಯತ್ನ ನಡೆಸಿದ್ದರು. ಈಗಲೂ ಬೇಡಿಕೆ ಮುಂದುವರೆದಿದೆ. ಆದರೆ, ರಿಜರ್ವ ಬ್ಯಾಂಕ್’ನಿಂದ ರಾಯಚೂರು ಜಿಲ್ಲಾ ಕೇಂದ್ರದಲ್ಲಿನ ವ್ಯವಹಾರಗಳು, ಶೇರುದಾರರು, ಲೇವಾದೇವಿ ಸೇರಿದಂತೆ ದಾಖಲೆಗಳು ಹೊಂದಾಣಿಕೆ ಕಾರ್ಯ ಹಿನ್ನೆಲೆ ಪ್ರತ್ಯೇಕ ಬ್ಯಾಂಕಿಗೆ ಅವಕಾಶ ತಡವಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ವ್ಯವಸ್ಥಾಪಕ ಶಿವರುದ್ರಯ್ಯ, ವೃತ್ತ ವೀಕ್ಷಕ ಅಲ್ಲಮಪ್ರಭು ಡಾಣಿ, ಆಡಳಿತ ಮಂಡಳಿ ನಿರ್ದೇಶಕರುಗಳು ಸೇರಿದಂತೆ ಸಿಬ್ಬಂದಿ ಪಲ್ಲವಿ, ಸುನಿತಾ, ಸೌಮ್ಯ, ಅರುಣಕುಮಾರಿ, ತಿಮ್ಮಯ್ಯ ಪಾಟೀಲ್ ಹಾಗೂ ಗ್ರಾಹಕರು ಇದ್ದರು.

ಪ್ರತ್ಯೇಕ ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಗಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಹಿಂದಿನ ಶಾಸಕ ಹಾಲಪ್ಪ ಆಚಾರ ಸೇರಿದಂತೆ ಅನೇಕರು ಪ್ರಯತ್ನ ನಡೆಸಿದ್ದರು. ಈಗಲೂ ಬೇಡಿಕೆ ಮುಂದುವರೆದಿದೆ. ಆದರೆ, ರಿಜರ್ವ ಬ್ಯಾಂಕ್’ನಿಂದ ರಾಯಚೂರು ಜಿಲ್ಲಾ ಕೇಂದ್ರದಲ್ಲಿನ ವ್ಯವಹಾರಗಳು, ಶೇರುದಾರರು, ಲೇವಾದೇವಿ ಸೇರಿದಂತೆ ದಾಖಲೆಗಳು ಹೊಂದಾಣಿಕೆ ಕಾರ್ಯ ಹಿನ್ನೆಲೆ ಪ್ರತ್ಯೇಕ ಬ್ಯಾಂಕಿಗೆ ಅವಕಾಶ ತಡವಾಗುತ್ತಿದೆ.

  •  ಶೇಖರಗೌಡ ಮಾಲಿಪಾಟೀಲ, ನಿರ್ದೇಶಕರು,         RKDCC ಬ್ಯಾಂಕ್.