– ಈ ನತದೃಷ್ಟ ಮಹಿಳೆ ಅಂಗವಿಕಲೆ ಅಲ್ಲವಂತೆ..!?

– ಶರಣಪ್ಪ ಕುಂಬಾರ.

ಕೊಪ್ಪಳ : ತೋಳ ದಾಳಿಗೆ ತುತ್ತಾಗಿ ತನ್ನ ಮೂಗು ಸೇರಿದಂತೆ ಮುಖದ ಸಂಪೂರ್ಣ ಸೌಂದರ್ಯ ಕಳೆದುಕೊಂಡಿರುವ ಮಹಿಳೆ ಅಂಗವಿಕಲೆ ಅಲ್ಲವೆಂಬ ಸುದ್ದಿ ಬಹಿರಂಗವಾಗಿದೆ..!?

   ತೋಳ ದಾಳಿಯಿಂದ ತನ್ನ ಸೌಂದರ್ಯವನ್ನೇ ಕಳೆದುಕೊಂಡು ವಿಕಲಚೇತನವಾಗಿ ಸಮಾಜದಲ್ಲಿ ಶಾಶ್ವತವಾಗಿ ಮಾಸ್ಕ್ ಧರಿಸಿಕೊಂಡು ಯಾರಿಗೂ ಮುಖ ತೋರಿಸದಂತೆ ಮುಖ ಮುಚ್ಚಿಕೊಂಡು ಜೀವನ ಸಾಗಿಸುತ್ತಿರುವ ಜಿಲ್ಲೆಯ ಕುಷ್ಟಗಿ ತಾಲೂಕಿನ ನಾಗಮ್ಮ ಮಹಾಂತೇಶ ಗುಡಿಹಿಂದಲ ಎಂಬ ನತದೃಷ್ಟ ಮಹಿಳೆಗೆ ವೈದ್ಯರು ಅಂಗವಿಕಲ ಪ್ರಮಾಣ ಪತ್ರ ನೀಡಿಲ್ಲ. ಅಂಗವಿಕಲ ಪ್ರಮಾಣ ಪತ್ರವಿಲ್ಲದೆ, ರಾಜ್ಯ ಹಾಗೂ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಾಸಾಶನ ಸೇರಿದಂತೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲವೆಂದು ಮಹಿಳೆ ಆರೋಪವ್ಯಕ್ತಪಡಿಸಿದ್ದಾಳೆ.
ಮೆದಳು ಸೇರಿದಂತೆ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಗೆ ಸಂಬಂಧಿಸಿದ ಇಲಾಖೆಯವರು ಅಂಗವಿಕಲ ಪ್ರಮಾಣ ಪತ್ರ ಒದಗಿಸುವ ಮೂಲಕ ನೆರವಿಗೆ ಮುಂದಾಗಬೇಕಾಗಿರುವುದು ಬಾಕಿ ಇದೆ..!