ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಮಳೆ, ಗಾಳಿಗೆ ಮನೆಗಳು ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ತಾಲೂಕಿನ ಚಳಗೇರ ಗ್ರಾಮದಲ್ಲಿ ಮಾಬೂಬಿ ಮುರ್ತುಜಸಾ ಕಾತರಕಿ ಎಂಬುವರ ಮನೆ ಹಾನಿಯಾಗಿದೆ. ಹುಲಿಯಾಪೂರು ಗ್ರಾಮದ ಬಸವರಾಜ ಕುಂಬಾರ ಹಾಗೂ ನೀರಲೂಟಿ ಗ್ರಾಮದಲ್ಲಿ ಹನುಮಗೌಡ ಶೇಖರಗೌಡ ಪೊಲೀಸ್ ಪಾಟೀಲ್, ಶಂಕ್ರಗೌಡ ಹನುಮಗೌಡ ಪೊಲೀಸ್ ಪಾಟೀಲ್ ಎಂಬುವರಿಗೆ ಸೇರಿದ ಎರಡು ಮನೆಗಳು ಭಾಗಶಃ ಹಾನಿಯಾಗಿದೆ.
ಈ ಕುರಿತು ಕಂದಾಯ ಇಲಾಖೆಯಿಂದ ಪಂಚನಾಮೆ ಕಾರ್ಯ ಕೈಗೊಂಡು ವರದಿ ಪಡೆದು ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದು ತಿಳಿಸಿರುವ ಅಧಿಕಾರಿಗಳು, ತಾಲೂಕಿನಲ್ಲಿ ಸುರಿದ ಮಳೆ ಪ್ರಮಾಣದ ವರದಿ ನೀಡಿದ್ದಾರೆ. ಕುಷ್ಟಗಿ – 15.8 ಮಿ.ಮೀ., ಹನುಮಸಾಗರ -8.1 ಮಿ.ಮೀ., ಹನುಮನಾಳ – 21.6 ಮಿ.ಮೀ., ದೋಟಿಹಾಳ – 3.1 ಮಿ.ಮೀ., ಕಿಲ್ಲಾರಟ್ಟಿ – 22.2 ಮಿ.ಮೀ., ತಾವರಗೇರಾ – 56.0 ಮಿ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
- ಹೆಚ್ಚು ಮಳೆ, ಗಾಳಿ ಇರುವುದರಿಂದ ಮಣ್ಣಿನ ಮನೆಗಳಲ್ಲಿರುವ ನಿವಾಸಿಗಳು ಮುಂಜಾಗ್ರತೆಯಿಂದ ಇರಬೇಕು. ಸುರಕ್ಷಿತ ಸ್ಥಳಗಳಲ್ಲಿ ವಾಸಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.