ಮಾಂತಪ್ಪ ಲೆಕ್ಕಿಹಾಳ ಇನ್ನಿಲ್ಲ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ತಾಲೂಕಿನ ನಡಶೇಶಿ ಗ್ರಾಮದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಜೀವಿ ಮಾಂತಪ್ಪ ತಂದೆ ಗುರಪ್ಪ ಲೆಕ್ಕಿಹಾಳ (85) ಶುಕ್ರವಾರ ಬೆಳಿಗ್ಗೆ ನಿಧನರಾದರು.

ಮೃತರು ಸಾರ್ವಜನಿಕ ಆಸ್ಪತ್ರೆಯ ಕ್ಯಾಂಟೀನ್ ಮಾಲಿಕರಾದ ವೀರೇಶ ಲೆಕ್ಕಿಹಾಳ ಅವರ ತಂದೆಯವರಾಗಿದ್ದು, ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮವಾದ ತಾಲೂಕಿನ ಪುರ್ತಗೇರಿ ಗ್ರಾಮದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಇಂದು ಸಂಜೆ 4-00 ಗಂಟೆಗೆ ಜರುಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ವೀರೇಶ ಲೆಕ್ಕಿಹಾಳ ಅವರ ತಂದೆಯವರ ಅಗಲಿಕೆಗೆ ಕುಷ್ಟಗಿ, ನಿಡಶೇಸಿ ಹಾಗೂ ಪುರ್ತಗೇರಿ ಗ್ರಾಮದ ಜನಪ್ರತಿನಿಧಿಗಳು, ಸ್ನೇಹಿತರು, ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.