– ಕೃಷಿ ಮಂತ್ರಿಗಳ ಉಸ್ತುವಾರಿ ಜಿಲ್ಲೆಯಲ್ಲಿಯೇ ಗೊಬ್ಬರದ ಅಭಾವ : ಮಾಜಿ ಶಾಸಕ ಹಸನಸಾಬ್ ದೋಟಿಹಾಳ..!

 

– ಶರಣಪ್ಪ ಕುಂಬಾರ.

ಕೊಪ್ಪಳ : ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರ ಉಸ್ತುವಾರಿ ಜಿಲ್ಲೆಯಲ್ಲಿಯೇ ಡಿಎಪಿ ಗೊಬ್ಬರದ ಕೊರತೆ ಎದ್ದು ಕಾಣುತ್ತಿದೆ ಎಂದು ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಆರೋಪ ವ್ಯಕ್ತಪಡಿಸಿದರು..!

‘ಕೃಷಿ ಪ್ರಿಯ’ ಪತ್ರಿಕೆವೊಂದಿಗೆ ಮಾತನಾಡಿದ ಅವರು, ಕುಷ್ಟಗಿ ಸೇರಿದಂತೆ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರಕ್ಕೆ ಸಾಕಷ್ಟು ಅಭಾವವಿದೆ. ಪಟ್ಟಣದ ಎಪಿಎಂಸಿಯಲ್ಲಿರುವ ಡಿಎಪಿ ಡೀಲರ್ ಗೂಡಾನ್ ಮುಂದೆ ರೈತರು ನಿತ್ಯ ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಲ್ಲುತ್ತಾರೆ. ಜಿಲ್ಲೆಯಲ್ಲಿ ರೈತರ ಗೋಳು ಕೇಳುವವರು ಯಾರೊಬ್ಬರು ಇಲ್ಲದಂತಾಗಿದೆ. ಆದರೆ, ಕೃಷಿ ಅಧಿಕಾರಿಗಳು ಮಾತ್ರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರಿಗೆ ಯಾವುದೇ ತರಹದ ಕೊರತೆಗಳು ಇಲ್ಲವೆಂದು ಹೇಳಿಕೆ ನೀಡುತ್ತಿರುವ ಸರಕಾರ ಮಾತ್ರ ರೈತರಿಗೆ ಮೊಸ ಮಾಡುತ್ತಿದೆ ಎಂದು ಹಸನಸಾಬ್ ದೋಟಿಹಾಳ ಆರೋಪಿಸಿದರು. ಕೊರೋನಾ ಮೂರನೇ ಅಲೆಯಲ್ಲಿ ಸರಕಾರ ಯಾವುದೇ ರೀತಿಯಲ್ಲಿ ತಯಾರಿ ಮಾಡಿಕೊಂಡಿಲ್ಲ. ರಾಜ್ಯವು ಆಪತ್ತಿನಲ್ಲಿದೆ. ಆಡಳಿತ ಪಕ್ಷದ ಮುಖಂಡರು ಸಿಎಂ ಕುರ್ಚಿಗೆ ಟಾವೆಲ್ ಹಾಕುವ ಬ್ಯೂಜಿಯಲ್ಲಿದ್ದಾರೆ ಎಂದು ವ್ಯಂಗವಾಡಿದರು..!