ಕೊಪ್ಪಳ | ಜಿಲ್ಲೆಯಾದ್ಯಂತ ಅನಧಿಕೃತ ಕೋಚಿಂಗ್ ಸೆಂಟರ್‌ : ಕ್ರಮಕ್ಕೆ ಡಿಡಿಪಿಇ ಆದೇಶ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಪರವಾನಗಿ ಮತ್ತು ಸರಿಯಾದ ಮೂಲಸೌಕರ್ಯವಿಲ್ಲದೆ ನಿರ್ಭಯವಾಗಿ ಕೆಲಸ ಮಾಡುವ ಕೊಪ್ಪಳ ಜಿಲ್ಲೆಯಲ್ಲಿರುವ ಅನಧಿಕೃತ ಕೋಚಿಂಗ್(ಟ್ಯೂಷನ್) ಸೆಂಟರಗಳ ಹಾವಳಿ ತಡೆಯುವಂತೆ ರಾಜ್ಯ ಖಾಸಗಿ ಸಂಸ್ಥೆಗಳ ಒಕ್ಕೂಟ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ದೂರು ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ದೂರು ಸ್ವೀಕರಿಸಿರುವ ಉಪ ನಿರ್ದೇಶಕರು, ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಡೆಸಲಾಗುತ್ತಿರುವ ಅನಧಿಕೃತ ಟ್ಯೂಷನ್ ತರಬೇತಿ(ಕೋಚಿಂಗ್ ಸೆಂಟರ್)
ಹಾಗೂ ಮನೆಪಾಠಗಳ ಕುರಿತು ಇಲಾಖೆಯಿಂದ ರಚನೆಯಾದ ತಂಡ ನಾಲ್ಕೂ ತಾಲೂಕುಗಳಲ್ಲಿ ಸಂದರ್ಶನ ಮಾಡಿ ಅಧಿಕೃತ/ಅನಧಿಕೃತಗಳ ಕೋಚಿಂಗ್ ಸೆಂಟರಗಳ ಮಾಹಿತಿ ಪಡೆದು ವರದಿ ಸಲ್ಲಿಸಿದ್ದಾರೆ.

ಅನಧಿಕೃತ ಸೆಂಟರ್’ಗಳು:

ಕೊಪ್ಪಳ ತಾಲೂಕು: ಬೆಟಗೇರಿಯ ವೀರೇಶ ಲಕ್ಷಾಣಿ ಶ್ರೀ ವರಸಿದ್ದಿ ವಿನಾಯಕ ಟ್ಯೂಟೋರಿಯಲ್, ಇರಕಲ್ಲಗಡಾ ಈಶ್ವರ ಕೋಚಿಂಗ್ ಕೇಂದ್ರ, ಬೋಚನಹಳ್ಳಿಯ ಜ್ಞಾನಭಾರತಿ ನವೋದಯ ತರಬೇತಿ ಕೇಂದ್ರ, ಹಲಗೇರಿಯ ಜ್ಞಾನದೀಪಾ ನವೋದಯ ತರಬೇತಿ ಕೇಂದ್ರ, ತ್ರಿಶೂಲ ಕೆ.ಆರ್.ಎಸ್. ಕೋಚಿಂಗ್ ಸೆಂಟರ್.

ಯಲಬುರ್ಗಾ ತಾಲೂಕು : ಮುಧೋಳದ ಅಜೀಜಸಾಬ ನವೋದಯ ತರಬೇತಿ ಕೇಂದ್ರ, ಪ್ರವೀಣ ಗುದಗಿ ಸಂಸ್ಕಾರ ಶಿಕ್ಷಣ ನವೋದಯ ಕೋಚಿಂಗ್ ಸೆಂಟರ್, ಯಲಬುರ್ಗಾದ ನೀಲನಗೌಡ್ರ ಪವಾಟೆಗೌಡ್ರ ಶ್ರೀ ಮಂಜುನಾಥ ಟ್ಯುಟೋರಿಯಲ್ಸ್, ನೂತನ ಸ್ಟಡಿ ಸರ್ಕಲ್. 

ಕುಷ್ಟಗಿ ತಾಲೂಕು : ಕುಷ್ಟಗಿ ಪಟ್ಟಣದಲ್ಲಿ ಸಜ್ಜಲಶ್ರೀ ನವೋದಯ ತರಬೇತಿ ಕೇಂದ್ರ, ನಳಂದ ನವೋದಯ ತರಬೇತಿ ಕೇಂದ್ರ, ಬ್ರಿಲಿಯಂಟ್ ನವೋದಯ ಕೋಚಿಂಗ್, ಎಕ್ಸಲೆಂಟ್ ನವೋದಯ ತರಬೇತಿ, ತಾಲೂಕಿನ ಹನುಮಸಾಗರದಲ್ಲಿ ವಿಶ್ವಭಾರತಿ ನವೋದಯ ಕೋಚಿಂಗ್, ಜಿಗಳೂರು ನವೋದಯ ಕೋಚಿಂಗ್.

ಗಂಗಾವತಿ ತಾಲೂಕು : ಹುಲಿಹೈದರದ ವೀರೇಶಸ್ವಾಮಿ ವಿವೇಕಾನಂದ ನವೋದಯ ತರಬೇತಿ ಕೇಂದ್ರ, ಕಾರಟಗಿಯ ಚಾಲೆಂಜಿಂಗ್ ಕೋಚಿಂಗ್ ಕ್ಲಾಸ್, ಕನಕಗಿರಿಯ ಚಾಣಕ್ಯ ನವೋದಯ ತರಬೇತಿ ಕೇಂದ್ರ, ಜ್ಞಾನದೇಗುಲ ನವೋದಯ ತರಬೇತಿ ಕೇಂದ್ರ.

  • ಇಲಾಖಾ ಅನುಮತಿ ಇಲ್ಲದೆ ಈ ನಾಲ್ಕು ತಾಲೂಕಿನಲ್ಲಿ ಒಟ್ಟು 19 ಅನಧಿಕೃತ ಕೋಚಿಂಗ್ ಸೆಂಟರ್‌ಗಳು ನಡೆಯುತ್ತಿದ್ದು, ಸದರಿ ಕೊಂಚಿಂಗ್ ಸೆಂಟರ್‌ಗಳ ವಿರುದ್ಧ “ಕರ್ನಾಟಕ ಶಿಕ್ಷಣ” ಅಧಿನಿಯಮ-1983ರ ಉಪ ನಿಯಮ-124ರಂತೆ ನಿಯಮಾನುಸಾರ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ರಮಕೈಗೊಳ್ಳಲು ಉಪ ನಿರ್ದೇಶಕರು ಆದೇಶಿಸಿದ್ದಾರೆ.