ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಅಲೆಮಾರಿ ಬುಡ್ಗ್ ಜಂಗಮ ಸುಡುಗಾಡು ಸಿದ್ದರ ಯುವಕರು ಶುಕ್ರವಾರ ದಿನ ಆಯೋಜಿಸಿದ್ದ ರಾಜ್ಯ ಮಟ್ಟದ ಅಲೆಮಾರಿ ಬುಡ್ಗ್ ಜಂಗಮ ಸುಡುಗಾಡು ಸಿದ್ದರ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅಲ್ಲಿ ಕುಡತಿನಿ ಬುಡಗ ಜಂಗಮ ತಂಡ ಪ್ರಶಸ್ತಿ ಗೆದ್ದುಕೊಂಡಿತು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಈ ವೊಂದು ಟೂರ್ನಾಮೆಂಟ್ ಅಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 41 ತಂಡಗಳು ಭಾಗವಹಿಸಿದ್ದವು. ಕ್ರಿಕೆಟ್ ಕಪ್ ಟೂರ್ನಿಯಲ್ಲಿ ರಣರೋಚಕ ಫೈನಲ್ ಪಂದ್ಯದಲ್ಲಿ ಕುಡತನಿಯ ಬುಡಗ ಜಂಗಮ ಕ್ರಿಕೆಟ್ ಕ್ಲಬ್ ವಿಜಯ ಸಾಧಿಸಿ 2024-25ನೇ ಸಾಲಿನ ಕಪ್ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಗವಿಸಿದೆಶ್ವರ ಸಿ.ಸಿ. ತಂಡವು ಎರಡನೇ ಬಹುಮಾನಕ್ಕೆ ತೃಪ್ತಿ ಪಟ್ಟಿತು. ವಿಜೇತ ತಂಡಕ್ಕೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಯಾದವ ಅವರು ಪ್ರಶಸ್ತಿ ವಿತರಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು.
ಈ ವೇಳೆ ಟೂರ್ನಮೆಂಟ್ ಆಯೋಜಕರಾದ ಅಂಜಿ ದುರ್ಗಾ, ಕಾಸಿಂ, ಶ್ರೀಶೈಲ, ಕೆ. ವಿಜಯ್, ಕೊಂಡಾಪಲ್ಲಿ ಮಹೇಶ, ಮಂಜುನಾಥ, ಶ್ರೀಶೈಲ ಬಿ., ಹನಮಂತ ಹಾಗೂ ಗ್ರೌಂಡ್ ಕಾವಲುಗಾರ ಯಮನೂರ ಮೇಲಿನಮನಿ ಉಪಸ್ಥಿತರಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಅಲೆಮಾರಿ ಸಮಾಜದ ಯುವಕರು, ಕ್ರೀಡಾಭಿಮಾನಿಗಳು ಪಂದ್ಯಾವಳಿ ವೀಕ್ಷಿಸಿ ಕ್ರಿಕೆಟ್ ಟೂರ್ನಮೆಂಟ್ ಸಂಭ್ರಮಕ್ಕೆ ಸಾಕ್ಷಿಯಾದರು.