– ಮಾಧ್ಯಗಳ ಮೇಲೆ ನಿರ್ಬಂಧ ಹೇರಬೇಕಾದ ಅನಿವಾರ್ಯತೆ ಇದೆ : ಬಯ್ಯಾಪೂರು..!

– ಶರಣಪ್ಪ ಕುಂಬಾರ

ಕೊಪ್ಪಳ : ಪರಿಮಿತಿ ಬಿಟ್ಟು ಕಾರ್ಯನಿರ್ವವಹಿಸುತ್ತಿರುವ ಮಾಧ್ಯಮಗಳ ಮೇಲೆ ನಿರ್ಭಂದ ಹೇರಬೇಕಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅಭಿಪ್ರಾಯವ್ಯಕ್ತಪಡಿಸಿದರು..!

 

ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಮೇಘಾ ಫಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತು ಬದಲಾದಂತೆ ನಾವು ಬದಲಾಗಬೇಕಾಗಿದೆ. ಪೈಪೋಟಿ ಹಾಗೂ ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ಳುವ ಭರಾಟೆ ಮಧ್ಯದಲ್ಲಿ ಅಶ್ಲೀಲ ದೃಶ್ಯಗಳನ್ನು ಬಿತ್ತರಿಸುತ್ತಿರುವ ಮಾಧ್ಯಗಳ ಮೇಲೆ ಸರಕಾರ ನಿರ್ಬಂಧ ಹೇರಲು ಒತ್ತಾಯಪಡಿಸಿದರು. ಸರಕಾರದ ಮಹತ್ವಕಾಂಕ್ಷಿ ಯೋಜನೆಗಳ ಪ್ರಸಾರದ ಜೊತೆಗೆ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರು ಮುಂದಾಗುವಂತೆ ಶಾಸಕರು ಸಲಹೆ ನೀಡಿದರು.