– ಕುಷ್ಟಗಿ ತಾಲೂಕಾ ಮಟ್ಟದ ಪತ್ರಿಕಾ ದಿನಾಚರಣೆ..!

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 26-07-2021 ರಂದು ತಾವರಗೇರಾ ಪಟ್ಟಣದ ಮೇಘಾ ಫಂಕ್ಷನ್ ಹಾಲ್ ನಲ್ಲಿ  ಹಮ್ಮಿಕೊಳ್ಳಲಾಗಿದೆ..!

    ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಪ್ಪಳದ ಹಿರಿಯ ಪರ್ತಕರ್ತ ಚಾಮರಾಜ ಸವಡಿ ಅವರು ಪತ್ರಿಕೆ ಹಾಗೂ ಪತ್ರಕರ್ತರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷ ಸಂಗಮೇಶ ಸಿಂಗಾಡಿ ಅಧ್ಯಕ್ಷತೆವಹಿಸುವರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕ್ರಮ್ ರಾಯ್ಕರ್, ಮಾಜಿ ಶಾಸಕರಾದ ಕೆ.ಶರಣಪ್ಪ ವಕೀಲರು, ಹಸನಸಾಬ್ ದೋಟಿಹಾಳ ಹಾಗೂ  ದೊಡ್ಡನಗೌಡ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಸಾಧಿಕ ಅಲಿ, ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ರಾಜ್ಯ ಸಮಿತಿ ಸದಸ್ಯರಾದ ಹೆಚ್.ಎಸ್.ಹರೀಶ, ಜಿ.ಎಸ್.ಗೋನಾಳ, ಹಿರಿಯ ಪತ್ರಕರ್ತರಾದ ವಿ.ಆರ್.ತಾಳಿಕೋಟಿ, ವೆಂಕಟೇಶ ಕುಲಕರ್ಣಿ ಸೇರಿದಂತೆ ಇನ್ನಿತರರು ಭಾಗವಹಿಸುವರು..!!