ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ಜು.27ರಂದು ಬೆಳಿಗ್ಗೆ 10ಕ್ಕೆ ಸ್ವಾತಂತ್ರ್ಯ ಸೇನಾನಿ, ತಪಸ್ವಿ ಮುರಡಿ ಭೀಮಜ್ಜನವರ 65ನೇ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಪುಂಡಲೀಕಪ್ಪ 8ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ..!
ಇದೇವೇಳೆ ರಾಯಚೂರಿನ ಹಿರಿಯ ಸಾಹಿತಿ ರಾಮಣ್ಣ ಹವಳೆ ಅವರು ಬರೆದ “ಕೊಪ್ಪಳ ನಾಡಿನ ಸ್ವಾತಂತ್ರ್ಯ ಹೋರಾಟ” ಕೃತಿ ಬಿಡುಗಡೆಯೂ ನಡೆಯಲಿದೆ. ಧಾರವಾಡದ ಸಂತ ಅರ್ಜುನ ದಾದಾ ಅವರ ಸಾನ್ನಿಧ್ಯದಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ್, ಹಸನ್ ಸಾಬ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ದೇವೇಂದ್ರಪ್ಪ ಬಳೂಟಗಿ ಇತರರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕ ಅಮೃತರಾಜ ಜ್ಞಾನಮೋಟೆ ಅವರು ತಿಳಿಸಿದ್ದಾರೆ..!