” ಕೊಪ್ಪಳ ಜಿಲ್ಲೆಯ ಬಿಜೆಪಿ ಮೂವರು ಶಾಸಕರಲ್ಲಿನ ಯಾವ ದೌರ್ಬಲ್ಯ ಪರಿಗಣಿಸಿ ಸಚಿವ ಸ್ಥಾನದ ಸೌಭಾಗ್ಯ ಕೈತಪ್ಪಿ ಹೋಗುತ್ತದೆ ಎಂಬುದು ಮಾತ್ರ ಜಿಲ್ಲೆಯ ಜನರ ಮನಸ್ಸಿನಲ್ಲಿ ಯಕ್ಷ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ. “
– ಶರಣಪ್ಪ ಕುಂಬಾರ.
ಕೊಪ್ಪ : ಜಿಲ್ಲೆಯಲ್ಲಿ ಜಯಶಾಲಿಯಾದ ಹಾಲಪ್ಪ ಆಚಾರ್ಯ, ಪರಣ್ಣ ಮುನವಳ್ಳಿ ಹಾಗೂ ಬಸವರಾಜ ದಡೆಸೂಗುರು ಈ ಮೂರು ಜನ ಬಿಜೆಪಿ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನದ ಭಾಗ್ಯ ಒಲಿದು ಬರುತ್ತಾ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ..!?
ಹೈದರಾಬಾದ್ ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದ ಕೊಪ್ಪಳ ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳಲ್ಲಿ 3 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಚುನಾಯಿತರಾಗಿದ್ದಾರೆ.
ಆರಂಭದ ದಿನಗಳಿಂದಲೂ ಜಿಲ್ಲೆಯ ಶಾಸಕರೊಬ್ಬರಿಗಾದರೂ ಸಚಿವ ಸ್ಥಾನ ದೊರಕುತ್ತಾ ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯವರಿಗೆ ಶಾಕ್ ಸಾಮಾನ್ಯವಾಗಿ ಬಿಟ್ಟಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಮೂರು ಜನ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನವು ಕೂಡಾ ಹುಸಿಯಾಗಿತು. ನಂತರದ ದಿನಗಳಲ್ಲಿ ಬಾಂಬೆ ವಲಸಿಗ ಶಾಸಕರಿಂದ ರಚಿತ (ಶೂಟ್ಗೇಸ್ ನಿಂದ) ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಇನ್ನೇನು ಜಿಲ್ಲೆಯಲ್ಲಿ ಎರಡು ಬಾರಿ ಆಯ್ಕೆಯಾದ ಹಿರಿಯ ಶಾಸಕರೊಬ್ಬರಿಗಾದರೂ ಸಿಕ್ಕೆ ಬಿಟ್ಟಿತು ಎಂದು ಹೇಳುವಷ್ಟುರಾಗಲೇ ಮತ್ತೆ ಜಿಲ್ಲೆಯವರಿಗೆ ಸಚಿವ ಸ್ಥಾನದ ಭಾಗ್ಯ ಕನಸಾಗಿಯೇ ಉಳಿದು ಬಿಟ್ಟಿತು. ಸಂಪೂರ್ಣವಾಗಿ ಬಹುಮತ ಹೊಂದಿರುವ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ನೇತೃತ್ವದ ಸರಕಾರದಲ್ಲಿಯಾದರೂ ಹಿಂದುಳಿದ ಕೊಪ್ಪಳ ಜಿಲ್ಲೆಯ ಶಾಸಕರೊಬ್ಬರಿಗಾದರೂ ಸಚಿವ ಸ್ಥಾನ ನೀಡುತ್ತಾರಾ ಎಂಬ ಬಿಲಿಯನ್ ಕನಸುಗಳನ್ನು ಹೊಂದಿದ ಜಿಲ್ಲೆಯ ಜನರ ಕನಸು ನನಸಾಗಬೇಕಾಗಿದೆ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿನ ಚುನಾವಣೆಗಳಲ್ಲಿ ಪ್ರತಿಪಕ್ಷಗಳು ಇದನ್ನೇ ಮುಖ್ಯ ಗಾಳವಗಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ..!!