ಕುಷ್ಟಗಿ – ಹನುಮಸಾಗರ ಪಿಎಸ್’ಐ ವರ್ಗಾ ; ನೂತನ ಪಿಎಸ್’ಐಗಳು ನಿಯುಕ್ತಿ

ಸಂಗಮೇಶ ಮುಶಿಗೇರಿ

ಸುದ್ದಿ ಸಮರ್ಪಣ |

ಕುಷ್ಟಗಿ : ಕುಷ್ಟಗಿ ಪೊಲೀಸ್ ಠಾಣೆ ಹಾಗೂ ಹನುಮಸಾಗರ ಪೊಲೀಸ್ ಠಾಣೆಯ ಪಿಎಸ್’ಐಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಕುರಿತು ಬುಧವಾರ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಬಿ.ಎಸ್. ಲೋಕೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ. ಕುಷ್ಟಗಿ ಪಿಎಸ್’ಐ ಮುದ್ದುರಂಗಸ್ವಾಮಿ ಅವರನ್ನು ಹಾಗೂ ಹನುಮಸಾಗರ ಠಾಣೆ ಪಿಎಸ್’ಐ ವಿರುಪಾಕ್ಷಪ್ಪ ಅವರನ್ನು ಬಳ್ಳಾರಿ ವಲಯ ಐ.ಜಿ.ಪಿ. ಕಚೇರಿಗೆ ವರ್ಗಾಯಿಸಲಾಗಿದೆ.

ವಿಜಯನಗರ ಜಿಲ್ಲೆಯ ಕಮಲಾಪೂರ ಪಿಎಸ್’ಐ ಹನುಮಂತಪ್ಪ ತಳವಾರ ಅವರನ್ನು ಕುಷ್ಟಗಿಗೆ ಹಾಗೂ ಬಳ್ಳಾರಿ ವಲಯ ಐ.ಜಿ.ಪಿ. ಕಚೇರಿಯಿಂದ ಸ್ಥಳ ನಿರೀಕ್ಷೆಯಲ್ಲಿದ್ದ ಪಿಎಸ್’ಐ ಧನಂಜಯ ಅವರನ್ನು ಹನುಮಸಾಗರ ಪೊಲೀಸ್ ಠಾಣೆಗೆ ನಿಯುಕ್ತಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ವರ್ಗಾವಣೆಗೊಂಡ ಸ್ಥಳದಿಂದ ಪಿಎಸ್’ಐಗಳನ್ನು ಕೂಡಲೇ ಬಿಡುಗಡೆಗೊಳಿಸಿ ಹೊಸತಾಗಿ ನಿಯುಕ್ತಿಗೊಳಿಸಿದ ಸ್ಥಳಕ್ಕೆ ವರದಿ ಮಾಡಿಕೊಂಡ ಕುರಿತು ಪಾಲನಾ ವರದಿ ನೀಡಲು ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ.